ಕೊಟ್ಟೂರು ಕೆರೆಯ ತೂಬು ರಿಪೇರಿ

julY 16 kottur 01
Published on

ಕೊಟ್ಟೂರು: ಪಟ್ಟಣದ ಕೆರೆಯ ಎರಡನೇ ತೂಬಿನಿಂದ ನೀರು ಹರಿಯುತ್ತಿದ್ದ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಮಂಗಳವಾರ ತೂಬನ್ನು ದುರಸ್ತಿ ಮಾಡಲಾಗಿದೆ. ಮರಳಿನ ಚೀಲ ಹಾಕಿ ನೀರು ಹರಿಯುವುದನ್ನು ತಡೆಯಲಾಗಿದೆ.

ತೂಬಿನಿಂದ ನಿರಂತರ ಒಂದು ವರ್ಷದಿಂದ ನೀರು ಹರಿಯುತ್ತಿತ್ತು. ಈ ಕುರಿತು ವಿಜಯವಾಣಿಯಲ್ಲಿ ಜು.14ರಂದು ‘ಕೆರೆ ತೂಬಿನಿಂದ ಪೋಲಾಗುತ್ತಿರುವ ನೀರು’ ಶೀರ್ಷಿಕೆಯಡಿ ಸುದ್ದಿ ಪ್ರಕಟವಾಗಿತ್ತು. ಈ ವರದಿಗೆ ಸ್ಪಂದಿಸಿದ ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಕೋಟೇಶ್ವರ ರಾವ್ ತೂಬು ದುರಸ್ತಿಗೆ ಕ್ರಮಕೈಗೊಂಡಿದ್ದಾರೆ.

ಇನ್ನು ಕೆರೆ ಏರಿಯ ಮೇಲಿರುವ ಮುಳ್ಳುಗಿಡಗಳನ್ನು ಕಡಿಯಬೇಕು. ಏರಿಯ ಮೇಲೆ ಕುಳಿತುಕೊಳ್ಳಲು ಸಿಮೆಂಟ್ ಕುರ್ಚಿಗಳನ್ನು ಅಳವಡಿಸಬೇಕು. ಕೆರೆಯ ರಾಜಕಾಲುವೆಯನ್ನು ರಿಪೇರಿ ಮಾಡಬೇಕು ಎಂದು ನಮ್ಮ ಕೆರೆ ನಮ್ಮ ಹೋರಾಟದ ರೂವಾರಿ ಅಂಚೆ ಕೊಟ್ರೇಶ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net