ಕೊಟ್ಟಿಗೆಯಲ್ಲಿದ್ದ ನಾಲ್ಕು ಮೇಕೆ ಕಳವು

Kottur theft
Published on

ಮೈಸೂರು: ಮೈಸೂರು ತಾಲೂಕಿನ ಜಯಪುರದಲ್ಲಿ ಕೊಟ್ಟಿಗೆ ಬೀಗ ಮುರಿದು ಕಳ್ಳರಿಬ್ಬರು 4 ಮೇಕೆಗಳನ್ನು ಬೈಕ್‌ನಲ್ಲಿ ಕದ್ದೊಯ್ದಿದ್ದಾರೆ.

ಜವನೇಗೌಡ ಅವರ ಪತ್ನಿ ಹಾಗೂ ಪುತ್ರ ಜಾನುವಾರುಗಳನ್ನು ಮೇಯಿಸಿಕೊಂಡು ಮನೆ ಪಕ್ಕದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದರು. ಬೆಳಗ್ಗೆ ಕೊಟ್ಟಿಗೆಗೆ ಹೋದಾಗ ಬಾಗಿಲಿನ ಬೀಗ ಒಡೆದಿತ್ತು.

ಒಳಹೋಗಿ ನೋಡಿದಾಗ ಹಸು-ಕರುಗಳಿದ್ದವು. ಆದರೆ ನಾಲ್ಕು ಮೇಕೆಗಳು ನಾಪತ್ತೆಯಾಗಿದ್ದವು. ಸಮೀಪದಲ್ಲಿರುವ ಅಂಗಡಿಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ ಯಾರೋ ಇಬ್ಬರು ಖದೀಮರು, ತಡರಾತ್ರಿ ಬೈಕ್‌ನಲ್ಲಿ ಮೇಕೆಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಜಯಪುರ ಪೊಲೀಸರು, ಕಳ್ಳರ ಪತ್ತೆಗೆ ಶೋಧ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net