ಕೊಟ್ಟಿಗೆಗೆ ಬೆಂಕಿ ಬಿದ್ದು ಕರು, 4 ಹಸು ಸಜೀವ ದಹನ

Published on

ಕೊರಟಗೆರೆ: ತಾಲೂಕಿನ ಸಿಎನ್​ ದುರ್ಗಾ ಹೋಬಳಿಯ ತೋವಿನಕೆರೆಯಲ್ಲಿ ಸೋಮವಾರ ತಡರಾತ್ರಿ ಕೊಟ್ಟಿಗೆಗೆ ಬೆಂಕಿಬಿದ್ದು, ಕರು ಮತ್ತು 4 ಹಸುಗಳು ಸಜೀವ ದಹನವಾಗಿವೆ. ಗ್ರಾಮದ ಕೊಂಡಪ್ಪ ಅವರ ಕೊಟ್ಟಿಗೆಗೆ ತಡರಾತ್ರಿ ಬೆಂಕಿ ಬಿದ್ದಿದ್ದು, ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ವೇಳೆಗೆ 4 ಹಸುಗಳು ಸ್ಥಳದಲ್ಲೇ ಮೃತಪಟ್ಟಿವೆ. ಗಾಯಗೊಂಡ ಕರುವೊಂದನ್ನು ರೈತ ರಕ್ಷಣೆ ಮಾಡಿದ್ದು, ಪಶು ಇಲಾಖೆಯ ವೈದ್ಯರು ಕರುವಿಗೆ ಚಿಕಿತ್ಸೆ ನೀಡಿದ್ದರಾದರೂ ಮಂಗಳವಾರ ಬೆಳಗ್ಗೆ ಕರು ಸಹ ಮೃತಪಟ್ಟಿದೆ. ಹಸುಗಳನ್ನು ಕಳೆದುಕೊಂಡ ರೈತನ ಆಕ್ರಂದನ ಮುಗಿಲುಮಟ್ಟಿತ್ತು. ಮಂಗಳವಾರ ಬೆಳಗ್ಗೆ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಾಗಭೂಷಣ್​ ಸ್ಥಳಕ್ಕೆ ಭೇಟಿ ನೀಡಿ ಮೃತ ಹಸುಗಳ ಪರೀೆ ನಡೆಸಿ ರೈತನಿಗೆ ಸಾಂತ್ವನ ಹೇಳಿ ಇಲಾಖೆಯಿಂದ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net