ಕೊಟ್ಟಿಗೆ ಕುಸಿದು ಹಸುಗಳ ಸಾವು

15KDR2 web
Published on

ಕಡೂರು: ಗುಣಸಾಗರ ಗ್ರಾಮದಲ್ಲಿ ಕೊಟ್ಟಿಗೆ ಕುಸಿದು ಎರಡು ಹಸುಗಳು ಸಾವನ್ನಪ್ಪಿವೆ. ಸುಮಿತ್ರಾಬಾಯಿ ಮಂಜಾನಾಯ್ಕ ದಂಪತಿ ಹಸುಗಳನ್ನು ಸಾಕಿದ್ದರು. ಇತ್ತೀಚೆಗೆ ಮಳೆ ಹೆಚ್ಚಾಗಿ ಕೊಟ್ಟಿಗೆಯಲ್ಲಿ ನೀರು ಉಕ್ಕುತ್ತಿತ್ತು. ಇದರಿಂದ ಕೊಟ್ಟಿಗೆಯ ಮಣ್ಣಿನ ಗೋಡೆಗಳು ಶಿಥಿಲಗೊಂಡು ಗುರುವಾರ ಬೆಳಗ್ಗೆ ಕುಸಿದಿದಾಗ ಎರಡು ಹಸುಗಳು ಮೃತಪಟ್ಟಿದ್ದು, ಮತ್ತೊಂದು ಹಸುವಿನ ಕೋಡು ಮುರಿದಿದೆ. ಕಂದಾಯ ಅಧಿಕಾರಿ ಜಿತೇಂದ್ರ ಸಿಂಗ್ ನಾಯಕ್ ಸ್ಥಳ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net