

ಧಾರವಾಡ: ನಿರಂತರ ಮಳೆಯಿಂದಾಗಿ ಶಿಥಿಲಾವಸ್ಥೆಯಲ್ಲಿದ್ದ ಮನೆ ಕುಸಿದು ಎರಡು ಎಮ್ಮೆಗಳು ಗಾಯಗೊಂಡ ಘಟನೆ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ. ಸುರೇಶ ರುದ್ರಪ್ಪ ತಿಪ್ಪಣ್ಣವರ ಎಂಬುವರ ಮನೆ ಏಕಾಏಕಿ ಕುಸಿದಿದ್ದು, ಮನೆಯವರೆಲ್ಲ ಹೊರಗೆ ಓಡಿ ಬಚಾವ್ ಆಗಿದ್ದಾರೆ. ಗೋಡೆಯ ಅವಶೇಷಗಳ ಅಡಿ ಸಿಲುಕಿದ್ದ ಎರಡು ಎಮ್ಮೆಗಳನ್ನು ಸ್ಥಳೀಯರು ಹರಸಾಹಸ ಮÁಡಿ ರಕ್ಷಿಸಿದ್ದಾರೆ. ವಿಷಯ ತಿಳಿದ ಕಂದಾಯ ಇಲಾಖೆ ವೃತ್ತ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಽಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.