

ಸಿದ್ದಾಪುರ: ಕಳೆದ ಒಂದು ವಾರದ ಹಿಂದೆ ಸುರಿದ ಭಾರಿ ಮಳೆಗೆ ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ವಾದ್ಗಾಲಜಡ್ಡಿ (ಚಳ್ಳೆಹದ್ದ)ಗೆ ತೆರಳುವ ರಸ್ತೆ ಕೊಚ್ಚಿಕೊಂಡು ಹೋಗಿದ್ದು ಸಂಚಾರಕ್ಕೆ ತೊಂದರೆ ಉಂಟಾಗಿದೆ.
ವಾದ್ಗಾಲಜಡ್ಡಿಯ ಎರಡು ಮನೆಗೆ ಹಾಗೂ ದೇವಾಸ, ಚಳ್ಳೆಹದ್ದ ಊರಿನ 15ಕ್ಕೂ ಹೆಚ್ಚು ಎಕರೆ ಕ್ಷೇತ್ರದ ತೋಟ-ಗದ್ದೆಗೆ ತೆರಳಲು ಇದೇ ಮುಖ್ಯ ರಸ್ತೆ ಆಗಿದೆ. ಈಗ ರಸ್ತೆ ಕೊಚ್ಚಿಕೊಂಡು ಹೋಗಿದ್ದರಿಂದ ನಿತ್ಯ ಕೃಷಿ ಕ್ಷೇತ್ರಕ್ಕೆ ಹೋಗಿ ಬರುವುದಕ್ಕೆ ಜನತೆ ತೊಂದರೆ ಪಡುವ ಸ್ಥಿತಿ ಉಂಟಾಗಿದೆ. ತಾತ್ಕಾಲಿಕವಾಗಿ ಮರದ ಸಂಕವನ್ನು ಹಾಕಿಕೊಂಡು ಜನತೆ ಸಂಚಾರ ಮಾಡುವ ಸ್ಥಿತಿ ಉಂಟಾಗಿದೆ.
ಮಳೆಗೆ ರಸ್ತೆ ಕೊಚ್ಚಿಕೊಂಡ ಹೋದ ಕುರಿತು ಮಾಹಿತಿ ಬಂದಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಂಚಾರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. | ಸಹನಾ ಡಿ. ಪಿಡಿಒ ಹಾರ್ಸಿಕಟ್ಟಾ ಗ್ರಾಪಂ