ಕೊಚ್ಚಿ ಹೋದ ಸೇತುವೆ ವೀಕ್ಷಿಸಿದ ಶಾಸಕ

MLA visited Basaveshwara layoout
Published on

ಗೋಣಿಕೊಪ್ಪ : ಮಳೆಗೆ ಕೊಚ್ಚಿ ಹೋಗಿದ್ದ ಚಿಣ್ಣರ ಹಾಡಿ ಸೇತುವೆ ಸ್ಥಳವನ್ನು ವಿರಾಜಪೇಟೆ ಶಾಸಕ ಪೊನ್ನಣ್ಣ ಭಾನುವಾರ ವೀಕ್ಷಿಸಿದರು. ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೇತುವೆ ನಿರ್ಮಾಣಕ್ಕೆ ಮಳೆಗಾಲದ ನಂತರ ಕ್ರಮ ವಹಿಸುವ ಭರವಸೆ ನೀಡಿದರು.
ಇದೇ ಸಂದರ್ಭ ಹಾಡಿಯ ಜನರ ಕ್ಷೇಮ ವಿಚಾರಿಸಿದ ಅವರು, ಗ್ರಾಮ ಪಂಚಾಯಿತಿ ಅನುದಾನದಲ್ಲಿ ನಿರ್ಮಿಸಿದ ತಾತ್ಕಾಲಿಕ ಅಡಿಕೆ ಮರದ ಕಾಲು ನಡಿಗೆ ಪಾಲವನ್ನು ಪರೀಕ್ಷಿಸಿದರು.
ನಿಟ್ಟೂರು ಗ್ರಾಪಂ ಅಧ್ಯಕ್ಷ ಕಾಟಿಮಾಡ ಶರೀನ್ ಮುತ್ತಣ್ಣ. ಉಪಾಧ್ಯಕ್ಷೆ ಅಳಮೇಂಗಡ ಪವಿತಾ, ಸದಸ್ಯರಾದ ಚಕ್ಕೇರ ಸೂರ್ಯ ಅಯ್ಯಪ್ಪ, ಕವಿತಾ ಪ್ರಭು, ಅಪ್ಪಣ್ಣ, ಅಮ್ಮಣಿ, ಮುಖಂಡರಾದ ಪೊರಂಗಡ ಪವನ ಚಿಟ್ಟಿಯಪ್ಪ, ಬಾನಂಡ ಪೃಥ್ವಿ, ಬಾಳೆಲೆ ಗ್ರಾಪಂ ಸದಸ್ಯರಾದ ಅದೇಂಗಡ ವಿನು ಉತ್ತಪ್ಪ, ತೀತೀರ ಚೋಂದಮ್ಮ, ಮೇಚಂಡ ವಿಭಿನ್, ಹಾಡಿ ಪ್ರಮುಖರಾದ ಕುಮಾರ, ಸತ್ಯ, ಪೊನ್ನ, ಬೆಂಡೆಕುತ್ತಿ ಬಾಗ್ಯ, ತಾಯು, ಅಪ್ಪು ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net