

ಜಯಪುರ: ಮೇಗುಂದಾ ಹೋಬಳಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಹೇರೂರು ಗ್ರಾಪಂನ ಸುಂಕದಗದ್ದೆಯ ಸೀನಯ್ಯ ಎಂಬುವವರ ಮನೆ ಗೋಡೆ ಬಿದ್ದಿದೆ. ವೀರಗಲ್ಲುಮಕ್ಕಿಯ ಪ್ರಫುಲ್ಲಾ ಎಂಬುವರ ಮನೆ ಹಿಂಭಾಗದ ಧರೆ ಕುಸಿದಿದೆ. ಮೇಗೂರು ಗ್ರಾಮದ ಕಡುಗುಂಡಿಯ ರವೀಂದ್ರ ಎಂಬುವವರ ಮನೆ, ಬೈರೆದೇವ್ರು ಗ್ರಾಮದ ಹಿರೇಹಡ್ಲು ಸುಂದರ ಎಂಬುವವರ ದನದ ಕೊಟ್ಟಿಗೆ ಹಾನಿಗೀಡಾಗಿದೆ. ಅತ್ತಿಕುಡಿಗೆ ಗ್ರಾಪಂ ಕೊಗ್ರೆ-ಹೊರನಾಡು ರಸ್ತೆ ನೇಡಂಕಿ ಬಳಿ ಬಿರುಕು ಬಿಟ್ಟಿದೆ. ರಸ್ತೆ ಮಧ್ಯೆ ಬಿರುಕು ಬಿಟ್ಟಿದ್ದು, ಇನ್ನಷ್ಟು ಬಿರುಕು ಬಿಟ್ಟರೆ ಸಂಪರ್ಕ ಕಡಿತಗೊಳ್ಳಲಿದೆ.