ಕೊಂಡ್ಲಿ ಮಾರಿಕಾಂಬಾ ಜಾತ್ರೆ ಮಾ.30ರಿಂದ

8sdp2( Kondli Marikamba Devi)
Published on

ಸಿದ್ದಾಪುರ: ಪಟ್ಟಣದ ಕೊಂಡ್ಲಿ ಶ್ರೀಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಮಾರ್ಚ್30ರಿಂದ ಏಪ್ರಿಲ್ 6ರವರೆಗೆ ಆಚರಿಸಲು ನಿರ್ಣಯಿಸಲಾಗಿದೆ ಎಂದು ಮಾರಿಕಾಂಬಾ ದೇವಾಲಯದ ಆಡಳಿತ ಸಮಿತಿ ಅಧ್ಯಕ್ಷ ಕೆ.ಜಿ. ನಾಯ್ಕ ಹಣಜೀಬೈಲ್ ಹೇಳಿದರು.

ದೇವಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 23ರಂದು ಅಂಕಿ ಹಾಕಲಾಗುತ್ತಿದ್ದು 30ರಂದು ರಾತ್ರಿ ಜೀವಕಳೆ ತುಂಬಲಾಗುತ್ತಿದೆ. ಏ. 7ರಂದು ಬೆಳಗ್ಗೆ ಜಾತ್ರಾ ಸಂಪ್ರದಾಯದಂತೆ ದೇವಿಯನ್ನು ವಿಸರ್ಜನೆ ಮಾಡಲಾಗುವುದು.

ಜಾತ್ರೆಯಲ್ಲಿ ಅಂಗಡಿ ತೆರೆಯಲು ಸದ್ಯದ ತೀರ್ವನದಂತೆ ಅವಕಾಶವಿಲ್ಲ. ಜಾತ್ರಾ ಕಮೀಟಿಯಿಂದಲೇ ಹಣ್ಣು ಕಾಯಿ ಅಂಗಡಿ ಇಡಲಾಗುತ್ತಿದೆ. ಸರ್ಕಾರ ಕೋವಿಡ್ ನಿಯಮಾವಳಿ ಸಡಿಲಿಸಿದಲ್ಲಿ ಅಂಗಡಿ ಮಳಿಗೆಗಳಿಗೆ ಅವಕಾಶ ನೀಡಲಾಗುವುದು. 25 ಸದಸ್ಯರನ್ನೊಳಗೊಂಡ ಸ್ವಾಗತ ಸಮಿತಿ ರಚಿಸಲಾಗಿದೆ ಎಂದರು.

ಪಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ವಿನಯ ಹೊನ್ನೆಗುಂಡಿ, ದೇವಾಲಯದ ಮೊಕ್ತೇಸರ ರಮೇಶ ಕೆ.ರಾಯ್ಕರ್, ಸದಸ್ಯರಾದ ಮಾರುತಿ ಕೆ. ಕಿಂದ್ರಿ ಕೊಂಡ್ಲಿ, ಉಮೇಶ ಕಾಮತ್, ಆರ್.ಎಂ.ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net