ಕೈವಾರ ತಾತಯ್ಯ ತತ್ವಗಳಲ್ಲಿದೆ ಪರಿಹಾರ-ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್

jayanti.jpg
Published on

ದಾವಣಗೆರೆ: ಕೈವಾರ ತಾತಯ್ಯನವರ ಮಾತು- ತತ್ವಗಳನ್ನು ಅಳವಡಿಸಿಕೊಂಡಲ್ಲಿ ಜೀವನದಲ್ಲಿ ಎದುರಾಗುವ ತೊಂದರೆಗಳಿಗೆ ಪರಿಹಾರ ಹಾಗೂ ಒತ್ತಡಗಳಿಂದ ಮುಕ್ತಿ ಸಿಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಬಲಿಜ ಸಂಘದ ಸಹಯೋಗದಲ್ಲಿ ನಗರದ ಬಲಿಜ ವಿದ್ಯಾರ್ಥಿನಿಲಯದಲ್ಲಿ ಹಮ್ಮಿಕೊಂಡಿದ್ದ ಕಾಲಜ್ಞಾನಿ ಶ್ರೀ ಯೋಗಿ ನಾರೇಯಣ ಯತೀಂದ್ರರ 297ನೇ ಜಯಂತ್ಯುತ್ಸವದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ರಾಜ್ಯದ ದೊಡ್ಡ ಸಮಾಜವನ್ನು ಮುನ್ನಡೆಸಿದ ಮಹನೀಯರಾದ ಕೈವಾರ ತಾತಯ್ಯನವರ ಆದರ್ಶಗಳ ಕುರಿತಂತೆ ಮುಂದಿನ ಪೀಳಿಗೆಗೂ ಪರಿಷಯಿಸುವ ಅಗತ್ಯವಿದೆ ಎಂದು ಹೇಳಿದರು.

16-17ನೇ ಶತಮಾನದಲ್ಲಿ ಅನೇಕ ಅವಧೂತರು ಅವತರಿಸಿದ್ದ ಕರ್ನಾಟಕ ಪುಣ್ಯಭೂಮಿ. ಶರಣ ಬಸವೇಶ್ವರ, ಕರಿಬಸವೇಶ್ವರ, ಕೊಟ್ಟೂರೇಶ್ವರ, ಮಲೆ ಮಹದೇಶ್ವರ ಅವರಂತೆಯೆ ಕೈವಾರ ತಾತಯ್ಯ ಕೂಡ ಜನ್ಮ ತಾಳಿದರು. ಆಧ್ಯಾತ್ಮಿಕ ಚಿಂತನೆಯೊಂದಿಗೆ ಅಲೌಕಿಕವಾದ ಅಳವಡಿಸಿಕೊಂಡು ಜನರಿಗೆ ಸನ್ಮಾರ್ಗದ ಮಾರ್ಗದರ್ಶನ ಮಾಡಿದ್ದಾರೆ ಎಂದು ಸ್ಮರಿಸಿದರು.

ದಾವಣಗೆರೆ ಜಿಲ್ಲಾ ಬಲಿಜ ಸಮಾಜದ ಅಧ್ಯಕ್ಷ ಎಸ್.ನರಸಿಂಹಮೂರ್ತಿ ಮಾತನಾಡಿ

ನಮಗೆ ಶೈಕ್ಷಣಿಕವಾಗಿ 2ಎ ಮೀಸಲಿದೆ. ಔದ್ಯೋಗಿಕವಾಗಿಯೂ ಇದು ಸಿಗಬೇಕಿದೆ. ಹೀಗಾಗಿ ಸಮಾಜ ಬಾಂಧವರು ಸಂಘಟಿತರಾಗಬೇಕು ಎಂದು ಹೇಳಿದರು.

ಮಾಜಿ ಮೇಯರ್ ಬಿ.ಜಿ.ಅಜಯಕುಮಾರ್ ಮಾತನಾಡಿ ಸಮಾಜದಕಚೇರಿಗೆ 100-100 ಅಡಿ ವಿಸ್ತೀರ್ಣವಲ್ಲದೆ ದೊಡ್ಡ ಅಳತೆಯ ನಿವೇಶನವಿದ್ದರೂ ಪ್ರಾಧಿಕಾರದಿಂದ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಉಪನ್ಯಾಸ ನೀಡಿದ ಕೊಂಡಜ್ಜಿಯ ಸಹ ಶಿಕ್ಷಕ ಕೊಟ್ರೇಶ್ ಹಳ್ಳಿ, ತಾತಯ್ಯ ಅವರು ಕಾರ್ಯಕ್ಷೇತ್ರವಾಗಿದ್ದ ಕೈವಾರ, ರಾಜ್ಯದ ಪುಣ್ಯಭೂಮಿ. ಕೈಗೆ ಸಿಗುವವರು ಹಾಗೂ ಈ ಕ್ಷೇತ್ರಕ್ಕೆ ಬಂದವರಿಗೆ ವರವಾಗಿದೆ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಬಲಿಜ ಸಮಾಜದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಯದೇವಮ್ಮ, ಗದಿಗೇಶ್ ಕೆ ಶಿರ್ಶಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net