ಕೈಮಗ್ಗ ತಂತ್ರಜ್ಞಾನದ ಡಿಪ್ಲೊಮಾಕ್ಕೆ ಅರ್ಜಿ ಆಹ್ವಾನ

Application-1-1280x720
Published on

ಚಿತ್ರದುರ್ಗ: ಪ್ರಸಕ್ತ ಶೈಕ್ಷಣಿಕ ಸಾಲಿನ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ ಡಿಪ್ಲೊಮಾ(ಡಿಎಚ್‌ಟಿಟಿ)ಕೋರ್ಸ್ ಕಲಿಕೆಗೆ ಅರ್ಹ ಅಭ್ಯರ್ಥಿಗಳಿಂದ ಜೂ. 5ರೊಳಗೆ ಆರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗೆ ಪ್ರತಿ ತಿಂಗಳು 2500 ರೂ.ಶಿಷ್ಯ ವೇತನ, ಹಣ ಪಾವತಿಸುವ ಆಧಾರದಡಿ ವಸತಿ ನಿಲಯದ ಸೌಲಭ್ಯವಿರುತ್ತದೆ. ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಇಂಗ್ಲಿಷ್ ಒಂದು ವಿಷಯವಾಗಿ ಅಭ್ಯಾಸ ಮಾಡಿ ಉತ್ತೀರ್ಣರಾಗಿರುವ 15ರಿಂದ 23 ವಯೋಮಿತಿಯೊಳಗಿನ ಹಾಗೂ 15ರಿಂದ 25ರ ವಯೋಮಿತಿಯ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net