ಕೈಮಗ್ಗ ಉತ್ಪನ್ನಗಳಿಗೆ ಸಿಗಲಿದೆ ಸ್ಪರ್ಧಾತ್ಮಕ ಬೆಲೆ

Published on

ಕೊಡೇಕಲ್: ಬಡ ನೇಕಾರರು ನೇಯ್ದ ಬಟ್ಟೆಯನ್ನು ಬಡತನದ ಬಟ್ಟೆಯನ್ನಾಗಿ ಮಾರಾಟ ಮಾಡುವುದನ್ನು ನಿಲ್ಲಿಸಲು ಮಹಾತ್ಮಗಾಂಧಿ ವಸ್ತೊçÃದ್ಯಮ ಯೋಜನೆ ಸಹಕಾರಿಯಾಗಿದೆ ಎಂದು ಯೋಜನೆ ಸಮಿತಿ ಗೌರವಾಧ್ಯಕ್ಷ ಚರಕ ಪ್ರಸನ್ನ ಹೇಳಿದರು.

ನಮ್ಮ ಸಾಂಸ್ಕೃತಿಕ ಪರಂಪರೆ ಅವಿಭಾಜ್ಯ ಅಂಗವಾಗಿರುವ ಕೈಮಗ್ಗ ನೇಕಾರರ ಕರಕುಶಲ ಕಲೆ ಅನನ್ಯವಾದದು. ಆದರೆ ಅವರು ನೇಯ್ದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಇಲ್ಲದಿರುವುದು ದುರಂತವೇ ಸರಿ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದರು.

ನೇಕಾರರು ನೇಯ್ದ ಉತ್ಪನ್ನಗಳನ್ನು ಬಹುರಾಷ್ಟಿçÃಯ ಕಂಪನಿಗಳು ಬ್ರಾÈಂಡ್ ಮಾಡಿ ಮಾರಾಟ ಮಾಡುತ್ತಿದ್ದು, ಕಳೆದ ವರ್ಷ ಅತಿ ಹೆಚ್ಚು ಕೈಮಗ್ಗ ಉತ್ಪನ್ನಗಳು ಮಾರಾಟವಾಗಿವೆ ಎಂದು ಪ್ರಧಾನಿಯೇ ಹೇಳಿದ್ದಾರೆ. ಆದರೂ ಬಟ್ಟೆ ನೇಯ್ಗೆ ಮಾಡುವ ನೇಕಾರ ಬಡವನಾಗಿಯೇ ಉಳಿದಿದ್ದು ಬೇಸರದ ವಿಷಯ ಎಂದರು.

೧೫ ವರ್ಷಗಳಿಂದ ಸತತ ಒತ್ತಡ ಹೇರಿದ್ದರ ಪರಿಣಾಮ ರಾಜ್ಯ ಸರ್ಕಾರ ಎರಡು ವರ್ಷದ ಹಿಂದೆ ಬಜೆಟ್‌ನಲ್ಲಿ ಮಹಾತ್ಮಗಾಂಧಿ ವಸ್ತೊçÃದ್ಯಮ ಯೋಜನೆ ಘೋಷಿಸಿತ್ತು. ಆದರೆ ಚಾಲನೆ ಮಾತ್ರ ಸಿಕ್ಕಿರಲಿಲ್ಲ. ಇದೀಗ ಸರ್ಕಾರದ ಆದೇಶದಂತೆ ಸ್ಪಷ್ಟವಾದ ರೂಪುರೇಷೆ ಸಿದ್ಧಗೊಳ್ಳುತ್ತಿದೆ. ಹತ್ತಿ, ರೇಷ್ಮೆ, ಉಣ್ಣೆ ಇತರ ನೈಸರ್ಗಿಕ ದಾರಗಳಿಂದ ತಯಾರಿಸಿದ ಕೈಮಗ್ಗ ಬಟ್ಟೆ ಉತ್ಪಾದಕರನ್ನು ಮಾರುಕಟ್ಟೆಯೊಂದಿಗೆ ಸಂಪರ್ಕಿಸುವ ಉದ್ದಿಮೆ ಇದಾಗಿದೆ. ಈ ಸಂಸ್ಥೆ ನೇಕಾರರಿಗೆ ವಿನ್ಯಾಸದಲ್ಲಿ ಸಹಾಯ ಮಾಡುವುದಲ್ಲದೆ ಗುಣಮಟ್ಟದ ಖಾತರಿಯೊಂದಿಗೆ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುತ್ತದೆ ಎಂದು ಹೇಳಿದರು.

ಸರ್ಕಾರದ ಸ್ವಾಯತ್ತ ಸಂಸ್ಥೆ, ಸಹಕಾರ ಸಂಘ, ನೇಕಾರ ತರಬೇತುದಾರರು, ವ್ಯಾಪಾರಿಗಳು, ಎನ್‌ಜಿಒಗಳು ಕೈಮಗ್ಗದೊಂದಿಗೆ ಸಂಭAದ ಹೊಂದಿರುವ ಖಾಸಗಿ ಕಂಪನಿಗಳು ಇರಲಿವೆ. ಈ ಸಂಸ್ಥೆ ಲಾಭರಹಿತವಾಗಿದು, ಇದರಲ್ಲಿನ ಲಾಭವನ್ನು ನೇರವಾಗಿ ನೇಕಾರರಿಗೆ ಬೋನಸ್ ರೂಪದಲ್ಲಿ ಹಂಚಲಿದೆ ಎಂದು ತಿಳಿಸಿದರು.

ರಾಷ್ಟಿçÃಯ ನೇಕಾರ ಒಕ್ಕೂಟಗಳ ರಾಜ್ಯ ಅಧ್ಯಕ್ಷರಾದ ಸ್ವಾತಂತ್ರö್ಯ ಹೋರಾಟಗಾರ ಸಂಗಪ್ಪ ಮಂಟೆ, ರಾಜ್ಯ ಸಂಚಾಲಕಿ ಶಾರದಾ ಚರಕ, ವಿನ್ಯಾಸ ಸಲಹೆಗಾರ ರಾಮಚಂದ್ರಪ್ಪ, ಬಸಣ್ಣ ಗೋಡ್ರಿ, ಬಸವರಾಜ ಅಂಗಡಿ, ಕೋರಿಸಂಗಯ್ಯ ಗಡ್ಡದ, ಸಂಗಯ್ಯ ಮಂಟೆ ಇತತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net