ಕೈದಿಗಳಿಗೂ ಇದೆ ಸಜ್ಜನರಾಗುವ ಕಾಲ

0604Klb05
Published on

ಕಲಬುರಗಿ: ಕೈದಿಗಳು ಜೈಲಿಗೆ ಬಂದ ಹಾದಿಯಲ್ಲಿ ಎಂದಿಗೂ ಹೆಜ್ಜೆ ಹಾಕಬಾರದು. ನಿಮ್ಮ ಆಲೋಚನೆಗಳು, ನಡವಳಿಕೆ ಮತ್ತು ಸ್ವಭಾವವನ್ನು ಬದಲಾಯಿಸಿಕೊಳ್ಳುವುದು ನಿಮ್ಮ ಜೀವನಕ್ಕೆ ದೊಡ್ಡ ತಿರುವು ನೀಡುತ್ತದೆ. ಸಜ್ಜನರಾಗಿ, ಗೌರವದಿಂದ ಬದುಕುವ ದಿನ ಬರುತ್ತದೆ ಎಂದು ಆಚಾರ್ಯ ಶ್ರೀ ಮಹೇಂದ್ರಸಾಗರ ಸೂರಿಜಿ ನುಡಿದರು.

ನಗರದ ಹೊರವಲಯದ ನಂದಿಕೂರ ಬಳಿಯ ಕೇಂದ್ರ ಕಾರಾಗೃಹದಲ್ಲಿ ಆದಿನಾಥ ಜೈನ ಶ್ವೇ. ಸಂಘ, ಭಾರತ್ ಫ್ರೆÊಡ್ ಸೊಸೈಟಿಯ ನೂತನ ಜೀನಾಲಯದಿಂದ ಶುಕ್ರವಾರ ಏರ್ಪಡಿಸಿದ್ದ ಧರ್ಮೋಪದೇಶದ ಸಾನ್ನಿಧ್ಯ ವಹಿಸಿ ಮಾತನಾಡಿ, ಒಬ್ಬ ವ್ಯಕ್ತಿ ದುಖಃದಿಂದ ತುಂಬಿದಾಗ ಕೆಲ ದಾನ, ಧರ್ಮ ಅಥವಾ ಸತ್ಸಂಗ ಮಾಡಲು ಬಯಸುತ್ತಾನೆ. ಪೂಜ್ಯರನ್ನು ಭೇಟಿಯಾಗಲು ಹೋಗುತ್ತಾರೆ. ಆದರೆ ನಿಮ್ಮನ್ನು ಭೇಟಿಯಾಗಲು ನಾನು ಬಂದಿz್ದೆÃನೆ ಎಂದು ಹೇಳಿದರು.

ಜೈಲು ಮತ್ತು ಅರಮನೆ ಮಧ್ಯೆ ವ್ಯತ್ಯಾಸವಿದೆ. ಇಬ್ಬರಿಗೂ ಹೊರಗೆ ಕಾವಲುಗಾರರಿz್ದÁರೆ. ಯಾರೂ ಹೊರಗೆ ಹೋಗದಂತೆ ಜೈಲಿನಲ್ಲಿ ಮತ್ತು ಹೊರಗಿನವರು ಒಳಗೆ ಹೋಗದಂತೆ ಅರಮನೆಯಲ್ಲಿ. ಜೈಲಿನ ವ್ಯವಸ್ಥೆ ನಿರ್ವಹಿಸುವ ಮಹಾನುಭಾವರೂ ಜೈಲಿನಲ್ಲಿz್ದÁರೆ. ಭದ್ರತಾ ಸಿಬ್ಬಂದಿ ಜೈಲಿನಲ್ಲಿz್ದÁರೆ, ಸಂತನೂ ಜೈಲಿನಲ್ಲಿz್ದÁರೆ - ಮೂವರೂ ಒಂದೇ ವೇದಿಕೆಯಲ್ಲಿz್ದÁರೆ. ಎಲ್ಲರ ಆಶಯ ಮನುಷ್ಯರನ್ನು ಮನುಷ್ಯರಂತೆ ಮಾಡುವುದು ಎಂದರು.
ಸAತರು ಬೆರೆಯಲು ಬಂದಿz್ದÁರೆ, ಪೊಲೀಸರು, ಆಡಳಿತಾಧಿಕಾರಿಗಳು ಭದ್ರತೆಗೆ ಇz್ದÁರೆ. ಇಲ್ಲಿ ಶಿಕ್ಷೆ ಅನುಭವಿಸಲು ಬಂದಿದ್ದೀರಿ. ಬರುವುದಕ್ಕೂ ಹೋಗುವುದಕ್ಕೂ ವ್ಯತ್ಯಾಸವಿದೆ ಎಂದರು.
ಮುಖ್ಯ ಅಧೀಕ್ಷಕ ರಂಗನಾಥ, ಸೂಪರೆಂಟೆಡ್ ಬಿ.ಎಂ.ಕೊಟ್ರೇಶ್, ಅಸಿಸ್ಟೆಂಟ್ ಅಧೀಕ್ಷಕ ಸುರೇಶ, ಪ್ರಮುಖರಾದ ಅಮಿತ್, ವಿಶಾಲ, ಶರಣು ಪಪ್ಪಾ, ಉತ್ತಮಚಂದಜೀ, ಘೇವರಚಂದಜಿ ಮಣಿಲಾಲ್‌ಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net