

ಯಾದಗಿರಿ : ಶಹಾಪುರ ನಗರದಲ್ಲಿ ಕೈಗಾರಿಕೋದ್ಯಮಗಳ ಸ್ಥಾಪನೆಗಾಗಿ ವಿವಿಧ ಕಡೆಗಳಲ್ಲಿ ಲಭ್ಯವಿರುವ ಸಕರ್ಾರಿ ಜಮೀನುಗಳನ್ನು ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಖುದ್ದಾಗಿ ಅಕಾರಿಗಳೊಂದಿಗೆ ತೆರಳಿ ಪರಿಶೀಲನೆ ನಡೆಸಿದರು.
ಈ ವೇಳೆ ಅವರು ಮಾತನಾಡಿ, ನಗರದಲ್ಲಿನ ನಿವೇಶನ ರಹಿತ ಕುಟುಂಬಗಳಿಗೆ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಸುಮಾರು 8 ಎಕರೆ ಜಮೀನು ಲಭ್ಯವಾಗಿದೆ. ಇನ್ನೂ ಹೆಚ್ಚು ಸಿಕ್ಕರೆ ಸಕರ್ಾರದಿಂದ ಖರೀದಿಸಿ ಹಲವು ಸಮುದಾಯಗಳಿಗೆ ವಸತಿ ಸೌಕರ್ಯ ಮತ್ತು ಉಳಿದ ಜಮೀನನ್ನು ಸ್ಮಶಾನಕ್ಕಾಗಿ ಮೀಸಲಿಡಲಾಗುವುದು ಎಂದು ತಿಳಿಸಿದರು.
ನಗರದ ಜನತೆಗೆ ಹಾಗೂ ಕೃಷ್ಣಾ ಅಚ್ಚುಕಟ್ಟು ಪ್ರದೇಶದ 4 ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ120 ಕೋಟಿ ರೂ.ಅನುದಾನವನ್ನು ಅಮೃತ 2.0 ಯೋಜನೆಯಡಿ ಮಂಜೂರು ಮಾಡಿದ್ದಾರೆ. ಅಂದಾಜು ಪತ್ರಿಕೆ ಸಿದ್ದಪಡಿಸುವಂತೆ ಅಕಾರಿಗಳಿಗೆ ಸೂಚಿಸಲಾಗಿದೆ. ನಗರದ ಜನತೆಗೆ ಈಗಾಗಲೇ 70 ಕೋಟಿ ರೂ.ವೆಚ್ಚದಲ್ಲಿ ಭೀಮಾ ನದಿಯಿಂದ ಪೈಪ್ಲೈನ್ ಮೂಲಕ ಫಿಲ್ಟರ್ಬೆಡ್ ಕೆರೆಗೆ ನೀರು ಸರಬರಾಜು ಮಾಡುವ ಕಾಮಗಾರಿ ಮುಕ್ತಾಯದ ಹಂತಕ್ಕೆ ತಲುಪಿದೆ ಎಂದು ವಿವರಿಸಿದರು.
ಕೆರೆಯಿಂದ ನಗರದ ಎಲ್ಲ ವಾಡರ್್ಗಳಲ್ಲಿ ದಿನದ 24 ಗಂಟೆಗಳು ಕುಡಿಯುವ ನೀರಿನ ಸೌಲಭ್ಯ ಒದಗಿಸಲು 150 ಕೋಟಿ ರೂ.ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಯೋಜನೆಗೆ ಸಧ್ಯ 95 ಕೋಟಿ ರೂ.ಬಿಡುಗಡೆಯಾಗಿದೆ. ಅಲ್ಲದೆ ಕ್ಷೇತ್ರದಲ್ಲಿನ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಗ್ರಾಮಗಳಾದ ಹುಲಕಲ್,ಕೆಂಚನಕವಿ, ಶಖಾಪುರ ಮತ್ತು ಅಳ್ಳಳ್ಳಿ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆಗೆ 25ಕೋಟಿ ರೂ.ಮಂಜೂರು ಮಾಡಲಾಗಿದ್ದು ಅಂದಾಜು ಪತ್ರಿಕೆ ಸಿದ್ದಪಡಿಸಿ 2 ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು ಎಂದು ಹೇಳಿದರು.