

ಚೇತನ್ ಚಕ್ಕೆರೆ ಬಿಡದಿ
ದೂರದ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಪ್ರತಿಷ್ಠಾಪನೆ ಮಾಡಲು ಉದ್ದೇಶಿಸಿರುವ ಶ್ರೀ ರೇಣುಕಾಚಾರ್ಯ ಅವರ 51 ಅಡಿ ಏಕಶಿಲೆಯ ವಿಗ್ರಹವನ್ನು ಬಿಡದಿಯಲ್ಲಿ ಕೆತ್ತನೆ ಮಾಡಲಾಗುತ್ತಿದೆ. ಸುಮಾರು 12 ಕೋಟಿ ರೂ. ವೆಚ್ಚದ ಈ ವಿಗ್ರಹವನ್ನು ಭಕ್ತ ಸಮೂಹ ಹಾಗೂ ರಾಜ್ಯ ಸರ್ಕಾರದ ನೆರವಿನಿಂದ ನಿಮಿರ್ಸಲಾಗುತ್ತಿದೆ.
ಬಿಡದಿಯ ಕೇತಿಗಾನಹಳ್ಳಿಗೆ ಹೋಗುವ ರಸ್ತೆಯಲ್ಲಿ ಶಿಲ್ಪಕಲೆಗಳನ್ನು ಕೆತ್ತನೆ ಮಾಡುವ ಕಲಾ ಕೇಂದ್ರ ಇದೆ. ಈ ಕೇಂದ್ರದಲ್ಲಿ ವಿಭಿನ್ನ ಶೈಲಿಯ ವೈವಿಧ್ಯಮಯ ಕಲಾಕೃತಿಗಳು ಹಾಗೂ ವಿಗ್ರಹ ಮೂತಿರ್ಗಳನ್ನು ಕೆತ್ತಲಾಗುತ್ತದೆ. ಇಲ್ಲಿ ಕೆತ್ತನೆಗೊಂಡಿರುವ ಕಲಾಕೃತಿಗಳು ಹೊರ ರಾಜ್ಯ ಹಾಗೂ ಹೊರ ದೇಶಗಳಲ್ಲೂ ನೆಲೆ ಕಂಡಿವೆ.
ಅಂದ ಹಾಗೇ ಈ ಎಲ್ಲ ಕಲೆಗಳ ಕೆತ್ತನೆಯ ಹಿಂದೆ ಶಿಲ್ಪಿ ಅಶೋಕ್ ಗುಡಿಗಾರ್ ಅವರ ಕಠಿಣ ಪರಿಶ್ರಮವಿದೆ. ಇವರ ನಿರಂತರ ಕಾಯಕದ ಫಲವಾಗಿ ಇಂದು ಕೈಗಾರಿಕಾ ಕ್ಷೇತ್ರದಲ್ಲಿ ಹೆಸರು ಮಾಡಿರುವ ಬಿಡದಿ ಪಟ್ಟಣ ಈಗ ಶಿಲ್ಪಗಳ ಕೆತ್ತನೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡುವಂತಾಗಿದೆ.
ಶಿವಮೊಗ್ಗದಿಂದ ಬಿಡದಿಗೆ: ಹೌದು ಅಶೋಕ್ ಗುಡಿಗಾರ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನವರು. 30 ವರ್ಷಗಳ ಹಿಂದೆ ಊರನ್ನು ಬಿಟ್ಟು ಬಂದ ಇವರು ಬಿಡದಿಯಲ್ಲಿ ನೆಲೆ ಕಂಡುಕೊಂಡಿದ್ದಾರೆ. ಚನ್ನಪಟ್ಟಣದ ಕೆಂಗಲ್ ಬಳಿ ಇರುವ ಹೊಂಬೇಗೌಡ ಶಿಕ್ಷಣ ಸಂಸ್ಥೆಗೆ ಚಿತ್ರಕಲಾ ಶಿಕ್ಷಕರಾಗಿ ವಿದ್ಯಾಥಿರ್ಗಳಿಗೆ ತರಬೇತಿ ನೀಡಲು ಬಂದಿದ್ದ ಇವರು, ಮತ್ತೆ ಸಾಗರದ ಕಡೆಗೆ ಮುಖ ಮಾಡದೆ ಬಿಡದಿಯಲ್ಲೇ ಪುಟ್ಟ ಅಂಗಡಿ ತೆರದು ಕೆತ್ತನೆ ಕೆಲಸ ಆರಂಭಿಸಿ ಇಂದು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ.
ಕಲ್ಲು ಹಾಗೂ ಕಂಚಿನ ಕಲಾಕೃತಿಗಳು: ಅಶೋಕ್ ಗುಡಿಗಾರ್ ಮತ್ತು ಇವರ ಸೋದರರು ಕಳೆದ 30 ವರ್ಷಗಳಿಂದಲೂ ದೇವರ ವಿಗ್ರಹಗಳು, ಅಪೂರ್ವ ಕಲಾಕೃತಿಗಳನ್ನು ಕೆತ್ತನೆ ಮಾಡುವ ಕಾಯಕದಲ್ಲಿ ತೊಡಗಿದ್ದಾರೆ. ಕಲ್ಲು, ಕಂಚು, ಮರ, ೈಬರ್ನಲ್ಲಿ ಆಕೃತಿಗಳನ್ನು ಕೆತ್ತನೆ ಮಾಡುತ್ತಾರೆ. ಅದರಲ್ಲೂ ಬೃಹತ್ ಕಲ್ಲಿನ ವಿಗ್ರಹಗಳನ್ನು ಕೆತ್ತನೆ ಮಾಡಿರುವುದು ಇವರ ವಿಶೇಷ.
ಎಲ್ಲೆಲ್ಲಿವೆ?
ಇವರು ಕೆತ್ತಿರುವ ಎಲ್ಲವೂ ಏಕಶಿಲೆ ಮೂತಿರ್ಗಳಾಗಿವೆ. ಗುಜರಾತ್ನ ಬಾಹುಬಲಿ, ಮಧ್ಯಪ್ರದೇಶದ ಮರೋನದ ಆದಿನಾಥ ವಿಗ್ರಹ, ಚೆನ್ನೆ$ನಲ್ಲಿ ಚಿತ್ರನಟ ಅರ್ಜುನ್ ಸರ್ಜಾ ನಿಮಾರ್ಣ ಮಾಡಿಸಿರುವ ಆಂಜನೇಯ ಸ್ವಾಮಿ, ಉಡುಪಿಯ ಮಧ್ವಾಚಾರ್ಯ, ಹೊಸದುರ್ಗದ ಕನಕದಾಸ ಹೀಗೆ ಹತ್ತು ಹಲವು ವಿಗ್ರಹಗಳನ್ನು ಕೆತ್ತನೆ ಮಾಡಿರುವ ಹೆಮ್ಮೆ ಅಶೋಕ್ ಗುಡಿಗಾರ್ ಅವರಿಗೆ ಸಲ್ಲುತ್ತದೆ. ಸುಮಾರು 4 ಅಡಿಗಳಿಂದ 51 ಅಡಿಗಳವರೆಗಿನ ಏಕಶಿಲೆಯ ವಿಗ್ರಹ ಕೆತ್ತನೆ ಮಾಡಿರುವುದರಲ್ಲಿ ಇವರದು ಎತ್ತಿದ ಕೈ. ಇದೀಗ 51 ಅಡಿಗಳ ರೇಣುಕಾಚಾರ್ಯ ಮೂತಿರ್ ಕೆತ್ತನೆ ಕಾರ್ಯ ಪ್ರಗತಿಯಲ್ಲಿದೆ.
ಬೃಹತ್ ವಿಗ್ರಹಗಳ ಕೆತ್ತನೆ ಮಾಡುವ ಸಲುವಾಗಿಯೇ ಬಿಡದಿಯ ಅಬ್ಬನಕುಪ್ಪೆ ಬಳಿ ಜಮೀನನ್ನು ಗುತ್ತಿಗೆ ಪಡೆದುಕೊಂಡಿದ್ದಾರೆ. ಆ ಜಾಗದಲ್ಲಿ ವಿಗ್ರಹಗಳ ಕೆತ್ತನೆ ಮಾಡಲಾಗುತ್ತದೆ. ಬೃಹತ್ ಕಲ್ಲುಗಳನ್ನು ಇಲ್ಲಿಗೆ ಕೆಲವರು ತಂದು ಇಲ್ಲಿಂದಲೇ ಕೆತ್ತನೆ ಮಾಡಿಸಿಕೊಂಡು ಕೊಂಡೊಯ್ಯುತ್ತಾರೆ. ಇನ್ನೂ ಕೆಲವರು ವಿಗ್ರಹ ಪ್ರತಿಷ್ಠಾಪನೆ ಮಾಡುವ ಸ್ಥಳಕ್ಕೆ ಇವರನ್ನು ಕರೆಸಿ ಕೆತ್ತನೆ ಮಾಡಿಸುತ್ತಾರೆ.
ಹೊರ ದೇಶಕ್ಕೆ ರವಾನೆ: ಬಿಡದಿ ಪಟ್ಟಣದಲ್ಲಿ ಅಶೋಕ್ ಗುಡಿಗಾರ್ ಅವರ ಕೈಯಲ್ಲಿ ಕೆತ್ತನೆ ಆಗಿರುವ ಹಲವು ವಿಗ್ರಹಗಳು ಹೊರ ದೇಶಗಳಿಗೂ ರವಾನಿಸಲಾಗಿದೆ. ಅಮೇರಿಕ, ರಷ್ಯಾ, ಇಂಗ್ಲೆಂಡ್ ಸೇರಿ ಹಲವು ದೇಶಗಳಿಗೆ ಕಂಚಿನ ಪ್ರತಿಮೆಗಳನ್ನು ಕಳುಹಿಸಲಾಗಿದೆ. ಪ್ರಮುಖವಾಗಿ ಮಹಾತ್ಮ ಗಾಂಧಿ, ಶಂಕರಾಚಾರ್ಯ, ಗಣೇಶ ಮೂತಿರ್, ಕೃಷ್ಣನ ವಿಗ್ರಹಗಳು ರ್ತಾಗಿವೆ.
ಪ್ರಶಸ್ತಿಯ ಗರಿ: ವಿಗ್ರಹಗಳ ಕೆತ್ತನೆಯನ್ನೇ ಮೈಗೂಡಿಸಿಕೊಂಡಿರುವ ಅಶೋಕ್ ಗುಡಿಗಾರ್ ಅವರಿಗೆ ಸಂದಿರುವ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಅವರು ಶಿಲ್ಪಕಲೆ ವಿಭಾಗದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಉಳಿದಂತೆ ರಾಜ್ಯ ಪ್ರಶಸ್ತಿ, ಗಣರಾಜ್ಯೋತ್ಸವ ಪ್ರಶಸ್ತಿಗಳು ಸೇರಿ ಹತ್ತು ಹಲವು ಪ್ರಶಸ್ತಿಗಳು ಲಭಿಸಿವೆ.
ತರಬೇತಿ ನೀಡುವ ಸಲುವಾಗಿ ಸಾಗರದಿಂದ ಬಂದೆ. ತದನಂತರ ಸಾಗರಕ್ಕೆ ವಾಪಸಾಗದೆ ಬಿಡದಿಯಲ್ಲೇ ನೆಲೆ ಕಂಡುಕೊಂಡು ಕಾಯಕ ಮುಂದುವರಿಸಿದ್ದೇನೆ. ಜತೆಗೆ ಸಹೋದರು ಕೂಡ ಬೆನ್ನೆಲುಬಾಗಿ ನಿಂತಿದ್ದಾರೆ. ನಮ್ಮ ಸಾಗರದಿಂದ 10ಕ್ಕು ಹೆಚ್ಚು ಮಂದಿ ಬಿಡದಿಯಲ್ಲಿ ವಿಗ್ರಹ ಕೆತ್ತನೆ ಮಾಡುತ್ತಿದ್ದಾರೆ. ಅಶೋಕ್ ಗುಡಿಗಾರ್