ಕೈಗಾರಿಕೆ ಬಲಗೊಂಡರೆ ಅಭಿವೃದ್ಧಿ ಸಾಧ್ಯ

clk hppc college
Published on

ವಿಜಯವಾಣಿ ಸುದ್ದಿಜಾಲ ಚಳ್ಳಕೆರೆ
ಕೈಗಾರಿಕಾ ವಲಯ ಬಲಗೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ತೋರಣಗಲ್ಲಿನ ಐರನ್ ಮತ್ತು ಸ್ಟೀಲ್ ಉತ್ಪಾದನಾ ಘಟಕದ ವ್ಯವಸ್ಥಾಪಕ ಕೃಷ್ಣಮೂರ್ತಿ ಹೇಳಿದರು.
ನಗರದ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಂ.ಕಾಂ ವಿದ್ಯಾರ್ಥಿಗಳು ಒಂದು ದಿನದ ಕೈಗಾರಿಕಾ ಅಧ್ಯಯನ ಪ್ರವಾಸ ಯೋಜನೆಯಡಿ ಗುರುವಾರ ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನಲ್ಲಿನ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಭೇಟಿ ನೀಡಿದ್ದ ವೇಳೆ ಮಾತನಾಡಿದರು.
ದೇಶದಲ್ಲೆ ಅತಿದೊಡ್ಡ ಸ್ಟೀಲ್ ಉತ್ಪಾದನಾ ಘಟಕ ಇದಾಗಿದ್ದು, ಮುಂದಿನ ದಿನಗಳಲ್ಲಿ ಏಷ್ಯಾ ಖಂಡದಲ್ಲೇ ಮೊದಲ ಸ್ಥಾನ ಪಡೆಯುವ ವಿಶ್ವಾಸವಿದೆ. ಅಗತ್ಯ ಸಾಮಗ್ರಿಗಳ ಉತ್ಪಾದನೆ ಪ್ರಮಾಣ ಹೆಚ್ಚಳವಾಗಬೇಕಿದೆ. ಈ ದೃಷ್ಟಿಯಲ್ಲಿ ಕೈಗಾರಿಕಾ ಕ್ಷೇತ್ರವನ್ನು ಬಲಪಡಿಸಿಕೊಳ್ಳುತ್ತಾ ಉಳಿಸಿಕೊಳ್ಳುವ ಕೆಲಸ ಆಗಬೇಕಿದೆ ಎಂದರು.
ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಉತ್ಪಾದನಾ ಘಟಕಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರಬೇಕು. ಕೈಗಾರಿಕಾ ವಲಯ ಅಧ್ಯಯನ ಇಚ್ಛಾಶಕ್ತಿಯ ರೀತಿಯಲ್ಲಿ ಓದಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.
ಕೈಗಾರಿಕಾ ಪ್ರವಾಸ ಸಂಚಾಲಕ ಬಿ.ಮಧುಸೂದನ್, ವಾಣಿಜ್ಯ ಉಪನ್ಯಾಸಕ ಡಾ.ಬೊಮ್ಮಯ್ಯ, ಸಿ.ಎ.ಬಸವರಾಜ, ಜಮುನಾ ರಾಣಿ, ಬ್ರಹ್ಮಾನಂದ ರೆಡ್ಡಿ, ಯರ‌್ರಿಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net