ಕೈಗಾರಿಕಾ ಕ್ರಾಂತಿ ದುರ್ಗದಲ್ಲೇ ಆಗಲಿದೆ

CTD 19 MLA 1-01
Published on


ಚಿತ್ರದುರ್ಗ: ಕೌಶಲ ತರಬೇತಿ ಪಡೆದವರು ಮುಂಬರುವ ದಿನಗಳಲ್ಲಿ ಉದ್ಯೋಗಕ್ಕಾಗಿ ಬೇರೆಡೆ ಅಲೆದಾಡುವ ಅಗತ್ಯ ಉದ್ಭವಿಸದು. ಚಿತ್ರದುರ್ಗದಲ್ಲೇ ಕೈಗಾರಿಕಾ ಕ್ರಾಂತಿ ಆಗಲಿದೆ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು.

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಿಂದ ಸೋಮವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ವಸತಿಗೃಹ ಮತ್ತು ತರಬೇತಿ ಕಟ್ಟಡದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಇಲ್ಲಿನ ಜಿಟಿಟಿಸಿ ತರಬೇತಿ ಕೇಂದ್ರದಲ್ಲಿ ಉತ್ತಮ ಕೋರ್ಸ್‌ಗಳು ವ್ಯಾಸಂಗಕ್ಕೆ ಲಭ್ಯವಿದ್ದು, ಇದರ ಪ್ರಯೋಜನ ಪಡೆದುಕೊಳ್ಳಿ. ಶಿಕ್ಷಣ ಮುಗಿದ ನಂತರ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ಒದಗಿಸಲು ಅನೇಕ ಕೈಗಾರಿಕೆಗಳು ತಲೆದೋರಲಿವೆ ಎಂದ ಅವರು, ಕೇಂದ್ರಕ್ಕೆ ಕೆಎಸ್‌ಆರ್‌ಟಿಸಿ ಸಾರಿಗೆ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.

ಪ್ರಾಂಶುಪಾಲ ಕೆ.ಬಿ.ಅರುಣ್‌ಕುಮಾರ್, ಆಡಳಿತಾಧಿಕಾರಿ ಕೆ.ಪಿ.ಕಾಟೇಗೌಡ, ಸಿಬ್ಬಂದಿಗಳಾದ ಡಿ.ಎಚ್.ಮಂಜುನಾಥ, ಶಶಿಧರ ಕೆ.ಅಂಗಡಿ, ಟಿ.ಚೇತನ್, ಎಂ.ಎನ್.ಸತೀಶ್, ಎಸ್.ಎ.ಶಮಾ, ಎನ್.ಅಜಯ್ಕುಮಾರ್, ಸಿ.ಎಸ್.ಸಚಿನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net