ಕೈಗಾ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ

IMG-20220916-WA0009.jpg
Published on

ವಿಜಯವಾಣಿ ಸುದ್ದಿಜಾಲ ಕಾರವಾರ
ಅಸಮರ್ಪಕವಾಗಿ ನೇಮಕಾತಿ ಪರೀಕ್ಷೆ ಆಯೋಜಿಸಿ ಸ್ಥಳೀಯ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಘರ್ಜನೆ ಬಣದ ಕಾರ್ಯಕರ್ತರು ಮಲ್ಲಾಪುರ ಕೈಗಾ ಟೌನ್ ಶಿಪ್ ಗೇಟ್ ಎದುರು ಶುಕ್ರವಾ ಪ್ರತಿಭಟನೆ ನಡೆಸಿದರು.
ಕೈಗಾದಲ್ಲಿ ಹೊಸದಾಗಿ 5 ಮತ್ತು 6 ನೇ ಘಟಕದಲ್ಲಿ ಕಾರ್ಯನಿರ್ವಹಿಸಲು ಡಿಪ್ಲೊಮಾ ಓದಿದ ತಾಂತ್ರಿಕ ಸಿಬ್ಬಂದಿಯ ನೇಮಕಾತಿ ಪರೀಕ್ಷೆ ಯನ್ನು ಹುಬ್ಬಳ್ಳಿಯಲ್ಲಿ ಖಾಸಗಿ ಕಂಪನಿಯ ಮೂಲಕ ನಡೆಸಲಾಗಿದೆ. ಆದರೆ, ಲಿಖಿತ ಪರೀಕ್ಷೆ ಅಸಮರ್ಪಕವಾಗಿದೆ ಎಂದು ಆರೋಪಿಸಿ ಅಣು ವಿದ್ಯುತ್ ನಿಗಮದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಕೈಗಾ ಅಣು ವಿದ್ಯುತ್ ನಿಗಮದ ನಿರ್ದೇಶಕರಿಗೆ ದೂರು ಪತ್ರ ಸಲ್ಲಿಸಿದರು.
ಅ.25 ರಿಂದ 28 ರವರೆಗೆ ಹುಬ್ಬಳ್ಳಿಯಲ್ಲಿ ನೇಮಕಾತಿ ಪರೀಕ್ಷೆಗಳು ನಡೆದಿವೆ. ಪರೀಕ್ಷೆಗೆ ಕೂರಿಸುವಲ್ಲಿ, ಸಮಯ ಪಾಲನೆಯಲ್ಲಿ, ಪ್ರಶ್ನೆ ಪತ್ರಿಕೆ ವಿತರಣೆಯಲ್ಲೂ ಹಲವು ಗೊಂದಲಗಳಿದ್ದವು. ಪರೀಕ್ಷೆಯ ಮುಂಚೆ ಖಾಸಗಿ ಏಜೆನ್ಸಿ ಯಾವುದೇ ಪಠ್ಯಕ್ರಮ ಘೋಷಿಸಿಲ್ಲ. ಸಿವಿಲ್ ಇಂಜಿನಿಯರಿಂಗ್ ಹುದ್ದೆ ನೇಮಕಾತಿಗೆ ನಡೆದ ಪರೀಕ್ಷೆಯಲ್ಲಿ ಮೆಕ್ಯಾನಿಕಲ್ ಹಾಗೂ ಕಂಪ್ಯೂಟರ್ ವಿಜ್ಞಾನದ ಪ್ರಶ್ನೆಗಳನ್ನು ಕೇಳಲಾಗಿದೆ. ಮೆಕ್ಯಾನಿಕಲ್ ಪರೀಕ್ಷೆಯಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು. ಗಾಗಲೇ ಮಾಡಿರುವ ಪರೀಕ್ಷೆಯನ್ನು ರದ್ದು ಮಾಡಬೇಕು. ಸ್ಥಳೀಯ ಅಭ್ಯರ್ಥಿಗಳಿಗಾಗಿ ಸ್ಥಳೀಯವಾಗಿ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು. ಸಂಘಟನೆಯ ಅಧ್ಯಕ್ಷ ರಾಜೇಶ ನಾಯಕ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net