ಕೈಕಾಲು ಕಟ್ಟಿ ನಿವೃತ್ತ ಶಿಕ್ಷಕನ ಕೊಲೆ

Published on

ಮೈಸೂರು: ನಿವೃತ್ತ ಶಿಕ್ಷಕರೊಬ್ಬರನ್ನು ಕೊಲೆ ಮಾಡಿ ತಾಲೂಕಿನ ದೇವಲಾಪುರದ ರಸ್ತೆಯ ಬಳಿ ಎಸೆಯಲಾಗಿದೆ.
ಮೃತಪಟ್ಟವರನ್ನು ನಂಜನಗೂಡು ಪಟ್ಟಣದ ನಿವೃತ್ತ ಶಿಕ್ಷಕ ನಾಗರಾಜು (70) ಎಂದು ಗುರುತಿಸಲಾಗಿದೆ.
ಯಾರೋ ದುಷ್ಕರ್ಮಿಗಳು ಹಗ್ಗದಿಂದ ಕೈಕಾಲು ಕಟ್ಟಿಹಾಕಿ ಕತ್ತನ್ನು ಕುಯ್ದು ಕೊಲೆ ಮಾಡಿದ್ದಾರೆ. ಭಾನುವಾರ ಬೆಳಗ್ಗೆ ಶವ ಪತ್ತೆಯಾಗಿದ್ದು, ಹಂತಕರು ಯಾರು, ಕೊಲೆಗೆ ಕಾರಣವೇನು? ಎಂಬುದು ತಿಳಿದು ಬಂದಿಲ್ಲ.
ನಾಗರಾಜು ಅವರ ಪುತ್ರ ಅನೂಪ್ ಅವರು ನೀಡಿದ ದೂರಿನ ಮೇರೆಗೆ ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net