

ನಾಪೋಕ್ಲು: ಸಮೀಪದ ಕೈಕಾಡು ಗ್ರಾಮದ ಪ್ರಯಾಣಿಕರ ತಂಗುದಾಣದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಅಸ್ಸಾಂ ಮೂಲದ ಮೂವರನ್ನು ನಾಪೋಕ್ಲು ಪೊಲೀಸರು ಮಂಗಳವಾರ ಸಂಜೆ ಬಂಧಿಸಿದ್ದಾರೆ.
ಮೂಲತಃ ಅಸ್ಸಾಂನ ಸೈಫುಲ್ ಇಸ್ಲಾಂ(27), ಜಹರ್ ಆಲಿ(27) ಹಾಗೂ ಅನರ್ ಹುಸೇನ್(37) ಬಂಧಿತರು. ಖಚಿತ ಮಾಹಿತಿ ಆಧರಿಸಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಪತ್ತೆಯಾದ 3.5 ಲಕ್ಷ ರೂ. ಮೌಲ್ಯದ 2 ಕೆ.ಜಿ. 100 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ಮೂವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಆರೋಪಿಗಳು ಲೈನ್‌ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ.
ಡಿವೈಎಸ್‌ಪಿ ಜಗದೀಶ್ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ಮಂಜುನಾಥ್, ಸಿಬ್ಬಂದಿ ಶಿವಪ್ರಸಾದ್, ಹರ್ಷ, ಶಮಿಲ್, ಶರತ್ ಕುಮಾರ್, ಪಂಚಲಿಂಗಪ್ಪ, ರವಿಕುಮಾರ್, ಮಧುಸೂದನ್, ವೆಂಕಟೇಶ್, ಮಹೇಶ್ ಇತರರು ಇದ್ದರು.