

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ತಾಲೂಕಿನ ಕೋರಮಂಗಲ, ಹಾರೋಹಳ್ಳಿ ಗ್ರಾಪಂಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಜಯಭೇರಿ ಬಾರಿಸಿದ್ದು, ಆಡಳಿತ ಕೈ ವಶವಾಗಲಿದೆ.
ಫೆ.26 ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಮಂಗಳವಾರ ತಾಲೂಕು ಆಡಳಿತಸೌಧದಲ್ಲಿ ನಡೆಯಿತು. 12 ಸ್ಥಾನಗಳ ಹಾರೋಹಳ್ಳಿ ಗ್ರಾಪಂನಲ್ಲಿ ಕಾಂಗ್ರೆಸ್ ಬೆಂಬಲಿತರು 11 ಸ್ಥಾನ, ಜೆಡಿಎಸ್ ಒಂದು ಸ್ಥಾನ ಪಡೆದಿದ್ದು, ಬಿಜೆಪಿ ಖಾತೆ ತೆರೆಯದೆ ಮುಖಭಂಗಕ್ಕೊಳಗಾಗಿದೆ.
10 ಸ್ಥಾನಗಳ ಕೋರಮಂಗಲ ಗ್ರಾಪಂನಲ್ಲಿ ಕಾಂಗ್ರೆಸ್ 8, ಜೆಡಿಎಸ್ ಬೆಂಬಲಿತರು 2 ಸ್ಥಾನ ಗೆಲ್ಲುವ ಮೂಲಕ ಎರಡೂ ಗ್ರಾಪಂಗಳು ಕೈವಶವಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹರ್ಷವನ್ನುಂಟು ಮಾಡಿದೆ.
ಕೋರಮಂಗಲ ಗ್ರಾಪಂ ವಿಜೇತರು:
1ನೇ ವಾರ್ಡ್ ಕೆ.ಎಂ.ಕೃಷ್ಣಪ್ಪ ಸಾಮಾನ್ಯ-504, ಕನಕರತ್ನಮ್ಮ-ಎಸ್ಸಿ ಮಹಿಳೆ- 415, ಟಿ.ಪುಷ್ಪ -ಎಸ್ಟಿ ಮಹಿಳೆ 454, 2 ನೇ ವಾರ್ಡ್ - ಎಚ್.ಧನಂಜಯ ಸಾಮಾನ್ಯ- 476, ಎನ್.ಗಾಯತ್ರಿ -ಸಾಮಾನ್ಯ ಮಹಿಳೆ -374, ಹರೀಶಕುಮಾರ್ -ಸಾಮಾನ್ಯ- 447, ದಂಡಿಗಾನಹಳ್ಳಿಯ ಕೆ.ಕಿರಣ್ -ಎಸ್ಸಿ 433, ಸಿ. ದೇವರಾಜ -ಸಾಮಾನ್ಯ- 531, ಮಂಜುಳ -ಬಿಸಿಎಂ ಎ-434, ಬೈರಾಪುರದ ಕೆ.ಎಂ.ಭಾಗ್ಯಲಕ್ಷ್ಮೀ- ಎಸ್ಸಿ ಮಹಿಳೆ 170 ಮತಗಳನ್ನು ಪಡೆದಿದ್ದಾರೆ.
ಹಾರೋಹಳ್ಳಿ ಗ್ರಾಪಂ ವಿಜೇತರು:
ಹಾರೋಹಳ್ಳಿಯ ಶ್ರೀನಿವಾಸ್- ಸಾಮಾನ್ಯ- 800, ಸುಮಾದೇವಿ- ಎಸ್ಟಿ ಮಹಿಳೆ -834, ಮಂಜುಳ- ಎಸ್ಸಿ ಮಹಿಳೆ-738, ಆಂಜಿನಮ್ಮ- ಎಸ್ಸಿ ಮಹಿಳೆ- 744, ಚಿಕ್ಕನಹಳ್ಳಿ ಎಂ.ಶಂಕರ್-ಸಾಮಾನ್ಯ- 447, ಎಸ್.ಮಂಜುಳ- ಸಾ.ಮ 433, ನಾಗಮ್ಮ- ಎಸ್ಸಿ ಮ- 387, ದೊಡ್ಡಮುದ್ದೇನಹಳ್ಳಿ ಸತೀಶ್-ಎಸ್ಸಿ- 152, ತಿಮ್ಮಳ್ಳಿ ಟಿ.ಎಂ. ಹರೀಶ್- ಸಾಮಾನ್ಯ- 213, ಎನ್.ಮನೋಹರ-ಎಸ್ಸಿ-200, ಬುಳ್ಳಹಳ್ಳಿಯ ಎನ್.ಮಂಜುಳ- ಸಾ.ಮ -411, ನರಸಮ್ಮ-ಎಸ್ಸಿ ಮ -393 ಮತಗಳನ್ನು ಮಡಿಲಿಗೆ ಹಾಕಿಕೊಂಡು ಜಯಶೀಲರಾಗಿದ್ದಾರೆ.
ಕಾಂಗ್ರೆಸ್ಸಿಗರ ವಿಜಯೋತ್ಸವ ಮತ ಎಣಿಕೆ ಕೇಂದ್ರದ ಎದುರು ಕಾಂಗ್ರೆಸ್ಸಿಗರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು. ಈ ವೇಳೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ದ್ಯಾವರಹಳ್ಳಿ ಶಾಂತಕುಮಾರ್, ಮಾಜಿ ಶಾಸಕ ಮುನಿನರಸಿಂಹಯ್ಯ, ಬ್ಲಾಕ್ ಅಧ್ಯಕ್ಷರಾದ ಸಿ.ಪ್ರಸನ್ನಕುಮಾರ್, ಹಾರೋಹಳ್ಳಿ ರಘು, ರಾಮಚಂದ್ರಪ್ಪ, ಕೆಪಿಸಿಸಿ ಸದಸ್ಯ ಎ.ಚಿನ್ನಪ್ಪ, ಅನಂತಕುಮಾರಿ ಚಿನ್ನಪ್ಪ, ಬುವನಹಳ್ಳಿ ಮುನಿರಾಜು, ಹೆಬ್ಬಾಳ ಆನಂದ್, ಸಾವಕನಹಳ್ಳಿ ಮುನಿರಾಜು, ಕೋರಮಂಗಲ ಮಂಜುನಾಥ್, ಮುದಗುರ್ಕಿ ನಾರಾಯಣಸ್ವಾಮಿ ಚೀಮಾಚನಹಳ್ಳಿ ರಾಮಚಂದ್ರಪ್ಪ ಇತರರು ವಿಜೇತರನ್ನು ಅಭಿನಂದಿಸಿದರು.
ಸಂಭ್ರಮಾಚರಣೆಯಲ್ಲಿ ಗಲಭೆ, ಲಾಠಿ ಪ್ರಹಾರ
ವಿಜಯಪುರ ಹೋಬಳಿಯ ಹಾರೋಹಳ್ಳಿಯಲ್ಲಿ ಚುನಾವಣಾ ಫಲಿತಾಂಶ ನಂತರ ವಿಜೇತರಾದ ಕಾಂಗ್ರೆಸ್ ಅಭ್ಯರ್ಥಿಗಳ ಬೆಂಬಲಿಗರು ಪಟಾಕಿ ಸಿಡಿಸಲು ಮುಂದಾದಾಗ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಕರ್ತರ ನಡುವೆ ವಾಕ್ಸಮರ ನಡೆದಿದ್ದು, ಪರಿಸ್ಥಿತಿಯ ಗಂಭೀರತೆ ಅರಿತ ಪೊಲೀಸರು ಲಾಠಿ ಪ್ರಹಾರ ನಡೆಸಿ ಉದ್ರಿಕ್ತರ ಗುಂಪು ಚದುರಿಸಿದರು. ಎರಡೂ ಗ್ರಾಪಂಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಗೆಲುವು ಸಾಧಿಸಿದ್ದರಿಂದ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲು ಮುಂದಾಗಿದ್ದೇ ಪರಿಸ್ಥಿತಿಗೆ ಕಾರಣವಾಗಿತ್ತು. ಸದ್ಯ ಗ್ರಾಮದಲ್ಲಿ ಪರಿಸ್ಥಿತಿ ಬೂದಿ ಮಚ್ಚಿದ ಕೆಂಡದಂತಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.