

ಬಸವಕಲ್ಯಾಣ: ಇತ್ತೀಚೆಗೆ ಕಾಂಗ್ರೆಸ್ ತ್ಯಜಿಸಿದ ಹಿರಿಯ ದಲಿತ ಮುಖಂಡ, ನಗರಸಭೆ ಸದಸ್ಯ ರವೀಂದ್ರ ಗಾಯಕವಾಡ್ ಅವರು ಶನಿವಾರ ಇಲ್ಲಿ ತಮ್ಮ ಅಪಾರ ಬೆಂಬಲಿಗರ ಜತೆಗೆ ಬಿಜೆಪಿ ಸೇರಿದರು.
ಗಾಯಕವಾಡ್ ಅವರಿಗೆ ಪಕ್ಷದ ಧ್ವಜ ನೀಡಿ ಸ್ವಾಗತಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಚುನಾವಣೆಯಲ್ಲಿ ಇನ್ನಷ್ಟು ಮತಗಳ ಅಂತರದಿಂದ ಗೆಲ್ಲಲು ಗಾಯಕವಾಡ್ ಅವರ ಸೇರ್ಪಡೆ ಕಾರಣವಾಗಲಿದೆ. ದಲಿತ ಸಮುದಾಯಕ್ಕೆ ಸಿಎಂ ಯಡಿಯೂರಪ್ಪ ಅವರು ಸಾಮಾಜಿಕ ನ್ಯಾಯ ನೀಡಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ ಎಂದರು.
ಗಾಯಕವಾಡ್ ಅವರು ಮೂರನೇ ಬಾರಿ ನಗರಸಭೆ ಸದಸ್ಯರಾಗಿದ್ದಾರೆ. ಕಳೆದ ಜಿಪಂ ಚುನಾವಣೆಂಲ್ಲಿ ಪರ್ತಾಪುರ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಬಿ. ನಾರಾಯಣರಾವ್ ಅವರ ಕಟ್ಟಾ ಬೆಂಬಲಿಗರಾಗಿದ್ದ ಇವರು ದಲಿತ ಸಮುದಾಯದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಕಾಂಗ್ರೆಸ್ ನಡವಳಿಕೆಗೆ ಬೇಸತ್ತು ರಾಜೀನಾಮೆ ಸಲ್ಲಿಸಿ, ಇದೀಗ ಕಮಲ ಮುಡಿಗೇರಿಸಿಕೊಂಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಸಂಸದ ಭಗವಂತ ಖೂಬಾ, ಮಾಜಿ ಸಚಿವರಾದ ಬಾಬುರಾವ ಚಿಂಚನಸೂರ, ಸುನೀಲ ವಲ್ಯಾಪುರೆ, ಶಾಸಕರಾದ ರಾಜಕುಮಾರ ಪಾಟೀಲ್ ತೇಲ್ಕೂರ್, ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ್, ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಚಲುವಾದಿ ನಾರಾಯಣಸ್ವಾಮಿ, ಅಭ್ಯರ್ಥಿ ಶರಣು ಸಲಗರ್, ಜಿಲ್ಲಾ ಅಧ್ಯಕ್ಷ ಶಿವಾನಂದ ಮಂಠಾಳಕರ್, ತಾಲೂಕು ಅಧ್ಯಕ್ಷ ಅಶೋಕ ವಕಾರೆ, ನಗರ ಘಟಕದ ಅಧ್ಯಕ್ಷ ಕೃಷ್ಣಾ ಗೋಣೆ, ಜಿಪಂ ಮಾಜಿ ಅಧ್ಯಕ್ಷ ಅನೀಲ ಭೂಸಾರೆ, ಕೆಎಸ್ಐಐಡಿಸಿ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಪ್ರಮುಖರಾದ ಡಿ.ಕೆ. ಸಿದ್ರಾಮ, ಅಂಬಾರಾಯ ಅಷ್ಟಗಿ, ಬಸವರಾಜ ಆರ್ಯ, ಈಶ್ವರಸಿಂಗ್ ಠಾಕೂರ್, ದೀಪಕ ಗಾಯಕವಾಡ, ಶಂಕರ ನಾಗದೆ, ಶಿವರಾಜ ಗಂದಗೆ, ಅಶೋಕಕುಮಾರ ಹೊಕ್ರಾಣೆ, ಜೈಕುಮಾರ ಕಾಂಗೆ, ಮಲ್ಲಿಕಾರ್ಜುನ ಕುಂಬಾರ, ಅರಹಂತ ಸಾವಳೆ ಇತರರಿದ್ದರು.