

ಕಿಕ್ಕೇರಿ: ಹೋಬಳಿ ಕೇಂದ್ರವಾದ ಕಿಕ್ಕೇರಿ ಗ್ರಾಪಂ ಅಧ್ಯಕ್ಷೆಯಾಗಿ ಜೆಡಿಎಸ್ ಬೆಂಬಲಿತೆ ತಾಯಮ್ಮ ದೇವರಾಜು, ಉಪಾಧ್ಯಕ್ಷೆಯಾಗಿ ಬಿಜೆಪಿ ಬೆಂಬಲಿತೆ ಸರಸ್ವತಿ ಗೋವಿಂದರಾಜು ಅವಿರೋಧವಾಗಿ ಆಯ್ಕೆಯಾದರು.
16 ಸದಸ್ಯರ ಬಲದ ಗ್ರಾಪಂ. 2ನೇ ಅವಧಿಗೆ ಅಧ್ಯಕ್ಷ ಶನಿವಾರ ಚುನಾವಣಾ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತೆ ತಾಯಮ್ಮ ದೇವರಾಜು, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತೆ ಸರಸ್ವತಿ ಗೋವಿಂದರಾಜು ಹೊರತು ಬೇರೆ ಯಾವುದೇ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆ ಘೋಷಿಸಲಾಯಿತು.
ಈ ಹಿಂದೆ ಮೊದಲ ಅವಧಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತರು ಅಧ್ಯಕ್ಷ-ಉಪಾಧ್ಯಕ್ಷರಾಗಿದ್ದರು. ದಿಢೀರ್ ಮೈತ್ರಿಯಿಂದ ಜೆಡಿಎಸ್-ಬಿಜೆಪಿಯ ಬೆಂಬಲಿತರಿಗೆ ಗ್ರಾಪಂ ಅಧಿಕಾರ ಒಲಿಯಿತು. ಚುನಾವಣಾಧಿಕಾರಿಯಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅರುಣ್‌ಕುಮಾರ್, ಪಿಡಿಒ ಚಲುವರಾಜು, ಕಾರ್ಯದರ್ಶಿ ಪಾಪೇಗೌಡ, ಲೆಕ್ಕ ಸಹಾಯಕ ವಾಸು, ಕುಮಾರ್ ಕರ್ತವ್ಯ ನಿರ್ವಹಿಸಿದರು.
ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಕೆ.ಎನ್.ಪುಟ್ಟೇಗೌಡ, ಯೋಗೇಶ, ತೇಜಸ್ವಿಕುಮಾರ, ಸುನೀತಾ ದಯಾನಂದ, ಜಯಲಕ್ಷ್ಮೀಧರ್ಮ, ಪದ್ಮಾವತಿ ಗೋವಿಂದ ಗೈರಾದ್ದರು.
ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿಮಾನಿಗಳು, ಪಕ್ಷಗಳ ಕಾರ್ಯಕರ್ತರು ಅಭಿನಂದಿಸಿದರು. ಗ್ರಾ.ಪಂ. ಸದಸ್ಯರಾದ ಎಸ್.ಕೆ. ಬಾಲಕೃಷ್ಣ, ಕೆ.ಜಿ.ಪುಟ್ಟರಾಜು, ಕೆ.ಆರ್.ರಾಜೇಶ್, ಕೆ.ಬಿ.ಚಂದ್ರಶೇಖರ್, ಕೆ.ಆರ್ ಕೃಷ್ಣ, ರೇಣುಕಾ ಅನಂತ, ಸಿ.ಎಲ್.ಜ್ಯೋತಿ ದಯಾನಂದ, ಭಾರತಿ ಪ್ರಕಾಶ್, ಜೆಡಿಎಸ್ ಮುಖಂಡರಾದ ಬಿ.ಎಂ.ಕಿರಣ್, ಐಕನಹಳ್ಳಿ ಕೃಷ್ಣೇಗೌಡ, ಐನೋರಹಳ್ಳಿ ಮಲ್ಲೇಶ್, ಕಾಯಿ ಮಂಜೇಗೌಡ, ಬಿಜೆಪಿ ಮುಖಂಡ ಕೆ.ಎಸ್.ಪ್ರಭಾಕರ್, ರವಿ ಇದ್ದರು.