ಕೈ ಟಿಕೆಟ್ ಸ್ಥಳೀಯರಿಗೆ ನೀಡಿ

Congress
Published on

ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ನೂರಾರು ಕೈ ಕಾರ್ಯಕರ್ತರು ಶನಿವಾರ ಕಾಂಗ್ರೆಸ್ ಜಿಲ್ಲಾ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಪಕ್ಷ ಸಂಘಟನೆ ದೃಷ್ಟಿಯಿಂದ ಅನೇಕ ವರ್ಷಗಳಿಂದ ಶ್ರಮಿಸುತ್ತಿರುವ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಹೈಕಮಾಂಡ್‌ಗೆ ಒತ್ತಾಯಿಸಿ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್ ಮೂಲಕ ಮನವಿ ರವಾನಿಸಿದರು.

ಪ್ರತಿ ಚುನಾವಣೆಯಲ್ಲೂ ಹೊರಗಿನವರಿಗೆ ಟಿಕೆಟ್ ನೀಡಿ, ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟು ಸ್ಥಳೀಯರನ್ನು ನಿರ್ಲಕ್ಷಿಸುತ್ತಿರುವುದು ಸರಿಯಲ್ಲ. ಮತದಾರರಿಗೆ ಸ್ಥಳೀಯರ ಕುರಿತು ಒಲವಿದೆ. ಆದ್ದರಿಂದ ಪಕ್ಷದ ವರಿಷ್ಠರು ನಮ್ಮ ಮನವಿಗೆ ಸ್ಪಂದಿಸಬೇಕು ಎಂದು ಕೋರಿದರು.

ಎಂ.ಕೆ.ತಾಜ್‌ಪೀರ್ ಮಾತನಾಡಿ, ನಿಮ್ಮ ಮನವಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಗಮನಕ್ಕೆ ತರಲಾಗುವುದು ಎಂದರು.

ವಕೀಲ ಎನ್.ಹರೀಶ್, ಮುಖಂಡರಾದ ಕುಂಚಿಗನಹಾಳ್ ಮಹಲಿಂಗಪ್ಪ, ಕೆ.ರಾಜಣ್ಣ, ಅಶ್ವಕ್‌ಆಲಿ, ಹತಾ ಉಲ್ಲಾ, ಬಿ.ರಾಜಣ್ಣ, ಇರ್ಫಾನ್, ಕೆ.ರುದ್ರಮುನಿ, ಬಾಗೇನಾಳ್ ಓಬಳೇಶ್, ಮಲ್ಲಪ್ಪ, ಅಬ್ದುಲ್ ಫರಾಹತ್, ಸಿರಾಜ್ ಉಲ್ಲಾ, ಚಿದಾನಂದಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net