ಕೈ ಕೊಟ್ಟ ಮುಂಗಾರು, ಬೆಳೆ ನಾಶಪಡಿಸಿದ ರೈತ

02
Published on

ಕೊಡೇಕಲ್ : ಸಕಾಲಕ್ಕೆ ಮಳೆ ಬಾರದ ಹಿನ್ನೆಲೆಯಲ್ಲಿ ತೇವಾಂಶ ಕೊರತೆಯಿಂದ ಒಣಗುತ್ತಿದ್ದ ೧೦ ಎಕರೆ ತೊಗರಿ ಬೆಳೆಯನ್ನು ರೈತ ಟ್ರಾÈಕ್ಟರ್‌ನಿಂದ ನಾಶಪಡಿಸಿದ್ದಾರೆ.

ಕೊಡೇಕಲ್ ಗ್ರಾಮದ ರೈತ ಹಣುಮಪ್ಪ ಪಕರಿ ಕಳೆದ ೧೫ ದಿನಗಳ ಹಿಂದಷ್ಟೇ ಬಿತ್ತನೆ ಮಾಡಿದ್ದ ಹತ್ತಿ, ತೇವಾಂಶ ಕೊರತೆಯಿಂದ ಸರಿಯಾಗಿ ನಾಟಿ ಬಾರದ ಹಿನ್ನೆಲೆಯಲ್ಲಿ ಬೆಳೆ ನಾಶಪಡಿಸಿದ್ದ ಬೆನ್ನಲ್ಲಿಯೇ ಇದೀಗ ಲೀಸ್ ಆಧಾರ ಮೇಲೆ ಪಡೆದಿದ್ದ ಜಮೀನಿನಲ್ಲಿ ಬೆಳೆದ ತೊಗರಿ ಬೆಳೆಯನ್ನು ಕೂಡ ನಾಶಪಡಿಸಿ ಹತಾಶಗೊಂಡಿದ್ದಾನೆ.

ಕಳೆದ ವರ್ಷ ಅತಿವೃಷ್ಟಿ ಮತ್ತು ಈ ವರ್ಷ ಅನಾವೃಷ್ಟಿಯಿಂದ ರೈತರು ತೀವ್ರ ಸಂಕಷ್ಟವನ್ನು ಅನುಭವಿಸುತ್ತಿದ್ದು , ಕೂಡಲೇ ಸರ್ಕಾರ ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net