ಕೈ ಕಾರ್ಯಕರ್ತರು ಬಿಜೆಪಿ ಸೇರ್ಪಡೆ

14BRG1
Published on

ಬೋರಗಾಂವ: ನಿಪ್ಪಾಣಿ ತಾಲೂಕಿನ ಭಿವಶಿ ಗ್ರಾಮದಲ್ಲಿ ನಿಪ್ಪಾಣಿ ಕ್ಷೇತ್ರದ ಅಭಿವೃದ್ಧಿ ಕಾರ್ಯ ಮೆಚ್ಚಿ ಬೋರಗಾಂವವಾಡಿಯ ಪಿಕೆಪಿಎಸ್ ಉಪಾಧ್ಯಕ್ಷ ಬಂಡು ಖೋತ, ನಿರ್ದೇಶಕರಾದ ಅನಿಲ ಗುಳಗುಳೆ, ಹಾಗೂ ರಾಹುಲ ಖೋತ, ದೀಪಕ ಖೋತ, ದಾದಾಸೋ ಖೋತ, ತಾತೋಬಾ ಕಳಂತ್ರೆ ಕಾಂಗ್ರೆಸ್ ತೊರೆದು ಶಾಸಕಿ ಶಶಿಕಲಾ ಜೊಲ್ಲೆ ಸಮ್ಮುಖದಲ್ಲಿ ಸೋಮವಾರ ಬಿಜೆಪಿ ಸೇರ್ಪಡೆಯಾದರು.

ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಕಾರ್ಯಕರ್ತರ ಆಗಮನದಿಂದ ಬಿಜೆಪಿ ಮತ್ತಷ್ಟು ಬಲಿಷ್ಠವಾಗಿದೆ ಎಂದರು.

ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ನರಸು ಖೋತ, ರಾಜು ಭದರಗಡೆ, ಬಾಬು ಖೋತ, ರಾಮಗೊಂಡಾ ಪಾಟೀಲ, ಸುವರ್ಣಾ ಟಾಕಮಾರೆ, ಸಂಜಯ ಗುಳಗುಳೆ, ಪಾಂಡುರಂಗ ಖೋತ, ದೇವಪ್ಪ ಭದರಗಡೆ, ದೇವಗೊಂಡಾ ಕಳಂತ್ರೆ, ದಾದು ಖೋತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net