ಕೇಸರಿ ಶಾಲು- ಹಿಜಾಬ್ ವಿವಾದದ ಎಫೆಕ್ಟ್, ಕಾಲೇಜಿನಲ್ಲಿ ಕುಂಕುಮಕ್ಕೂ ತಗಾದೆ, ತರಗತಿ ಪ್ರವೇಶಕ್ಕೆ ನಿರಾಕರಣೆ....!

IMG-20220218-WA0023
Published on

ವಿಜಯಪುರ: ಕೇಸರಿ ಶಾಲು ಹಾಗೂ ಹಿಜಾಬ್ ವಿವಾದದ ಮುಂದುವರಿದ ಭಾಗವಾಗಿ ಕುಂಕುಮಕ್ಕೂ ತಗಾದೆ ಎದ್ದಿದೆ....!

ಇಂಡಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕುಂಕುಮ ಹಚ್ಚಿಕೊಂಡು ಬಂದ ವಿದ್ಯಾರ್ಥಿಗೆ ಪ್ರಾಚಾರ್ಯರು ತರಗತಿ ಪ್ರವೇಶಕ್ಕೆ ನಿರಾಕರಿಸಿದ್ದಾರೆ. ಇದರಿಂದ ಕಾಲೇಜಿನ ವಿದ್ಯಾರ್ಥಿ ಹಾಗೂ

ದೈಹಿಕ ಉಪನ್ಯಾಸಕನ ಮಧ್ಯೆ ವಾಗ್ವಾದ ನಡೆದಿದೆ.

ಘಟನೆ ವಿವರ: ಶುಕ್ರವಾರ ಬೆಳಗ್ಗೆ ಎಂದಿನಂತೆ ಕಾಲೇಜು ಆರಂಭಗೊಳ್ಳುತ್ತಿದ್ದಂತೆ ವಿದ್ಯಾರ್ಥಿಗಳು ತರಗತಿಯತ್ತ ಹೆಜ್ಜೆ ಹಾಕಿದರು. ಈ ವೇಳೆ ಗಂಗಾಧರ ಬಡಿಗೇರ ಎಂಬ ವಿದ್ಯಾರ್ಥಿ ಹಣೆಗೆ ಕುಂಕುಮ ಹಚ್ಚಿಕೊಂಡು ಕಾಲೇಜಿಗೆ ಆಗಮಿಸಿದ್ದನ್ನು ಕಂಡು ದೈಹಿಕ ಉಪನ್ಯಾಸಕ

ಸಂಗಮೇಶ ಗೌಡ ಕುಂಕುಮ ತೆಗೆದು ತರಗತಿಗೆ ಬರಲು ಹೇಳಿದರು. ಇದರಿಂದ ಮಾತಿನ ಚಕಮಕಿ ನಡೆಯಿತು. ಬಳಿಕ ಪೊಲೀಸರು ವಿದ್ಯಾರ್ಥಿ ಯ ಮನವೊಲಿಸಿ ತರಗತಿಗೆ ಹಾಜರುಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net