ಕೇಸರಿ ಬೆಟ್ಟದಲ್ಲಿ ತಪೋನುಷ್ಠಾನ ಆರಂಭ

Shree Dvitiya Samba Shivacharya (VK SALAGAR
Published on

ಕಲಬುರಗಿ: ನಗರ ಸಮೀಪದ ಜೇರ‍್ಗಿ ರಸ್ತೆಯ ಕೇಸರಿ ಬೆಟ್ಟದಲ್ಲಿ ಶ್ರೀ ಸಾಂಬಶಿವಯೋಗಿಶ್ವರ ಸಂಸ್ಥಾನ ಹಿರೇಮಠದಿಂದ ಶ್ರಾವಣ ಮಾಸ ರ‍್ಯಂತ ತ್ರಿಕಾಲ ಇಷ್ಟಲಿಂಗ ಪೂಜಾ ತಪೋನುಷ್ಠಾನ ನಡೆಯಲಿದೆ ಎಂದು ಸಾಂಬ ಸೇನಾ ಅಜಲಪುರ ತಾಲೂಕಾಧ್ಯಕ್ಷ ಮಲ್ಲಿಕರ‍್ಜುನ ಸಾಮ್ರಾಟ ಹೇಳಿದರು.

ಉಪಾಚರ‍್ಯರತ್ನ ಬಾಲತಪಸ್ವಿ ದ್ವೀತಿಯ ಸಾಂಬಶಿವಯೋಗಿ ಶಿವಾಚರ‍್ಯರ ೩೧ನೇ ಶ್ರಾವಣ ಮಾಸದ ತಪೋನುಷ್ಠಾನ, ಪೂಜಾ ಅನುಷ್ಠಾನ ಜು.೨೫ರಿಂದ ಆ.೨೪ವರೆಗೆ ನಡೆಯಲಿವೆ. ಶ್ರಾವಣದ ಪ್ರತಿ ಸೋಮವಾರ ರಾಜೋಪಚಾರ ಮಹಾಪೂಜೆ ಸಾಮೂಹಿಕವಾಗಿ ನಡೆಯಲಿದೆ. ಮಹಾರಾಷ್ಟ್ರ ಆಂಧ್ರಪ್ರದೇಶ ಸೇರಿ ವಿವಿಧೆಡೆಯಿಂದ ಸಹಸ್ರಾರು ಭಕ್ತರು ಆಗಮಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿವಿಧ ಗ್ರಾಮಗಳ ಭಕ್ತರು ಪಾದಯಾತ್ರೆ ಮೂಲಕ ಕೇಸರಿ ಬೆಟ್ಟಕ್ಕೆ ಆಗಮಿಸಲಿದ್ದಾರೆ. ನಿತ್ಯ ಭಜನೆ, ಸಂಗೀತ, ನೃತ್ಯ, ಕಲಾ ಪ್ರರ‍್ಶನ, ಪ್ರವಚನ ಸೇರಿ ಹಲವು ಕರ‍್ಯಕ್ರಮಗಳು ತ್ರಿಕಾಲ ಶ್ರೀರುದ್ರ ಪೂಜೆ, ಅನ್ನದಾಸೋಹ ನಡೆಯಲಿದೆ ಎಂದು ಹೇಳಿದರು.

ಸೇನೆ ಜಿಲ್ಲಾಧ್ಯಕ್ಷ ಶರಣಗೌಡ ಪಾಟೀಲ್​ ನಿರ‍್ಬಗಾ, ನಿಂಗರಾಜ ಯಾಳಗಿ, ವಿಜಯಕುಮಾರ ನಂದಿಕೂರ, ಸಾಗರ ಎಂ.ಅಂಗಡಿ, ನಿಂಗರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net