ಕೇಸರಿ ಕಂಡ್ರೆ ಕಾಂಗ್ರೆಸ್‌ಗೆ ಹೊಟ್ಟೆ ಉರಿ

BY vijayendr
Published on

ಕಲಬುರಗಿ: ಮಂಡ್ಯದಲ್ಲಿ ಗ್ರಾಪಂ ಸದಸ್ಯರು ಒಕ್ಕೋರಲಿನಿಂದ ನಿರ್ಧರಿಸಿ ಹನುಮ ಧ್ವಜ ಹಾರಿಸಿದ್ದಾರೆ. ಅದನ್ನು ಕಾಂಗ್ರೆಸ್ ಸರ್ಕಾರ ತೆಗೆಸಿ, ತನ್ನ ಹೊಟ್ಟೆ ಉರಿ ಪ್ರದರ್ಶಿಸಿದೆ. ಕಾಂಗ್ರೆಸ್ಸಿಗರಿಗೆ ರಾಮ, ಹನುಮ, ಕೇಸರಿ ಧ್ವಜ, ಬಿಜೆಪಿ ಕಾರ್ಯಕರ್ತರನ್ನು ಕಂಡರೆ ಹೊಟ್ಟೆ ಉರಿಯಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಸೋಮವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಮತ್ತು ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಜ.೨೨ರಂದು ರಾಮಮಂದಿರ ಉದ್ಘಾಟನೆಯಾದ ನಂತರ ಹೊಟ್ಟೆ ಉರಿ ಹೆಚ್ಚಳವಾಗಿ ಕೇಸರಿ ಧ್ವಜಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಕಾಂಗ್ರೆಸ್‌ನ ಷಡ್ಯಂತ್ರ, ಬೆದರಿಕೆಗೆ ಬಿಜೆಪಿ ಕಾರ್ಯಕರ್ತರು ಹೆದರಬೇಕಿಲ್ಲ. ಧರ್ಮ, ದೇಶ ರಕ್ಷಣೆಗೆ ಸದಾ ಬೆನ್ನೆಲುಬಾಗಿ ಬಿಜೆಪಿ ನಿಲ್ಲುತ್ತದೆ ಎಂದು ವಿಶ್ವಾಸ ನೀಡಿದರು.
ಕಾಂಗ್ರೆಸ್ಸಿಗರು ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಭ್ರಮೆಯಲ್ಲಿ ಇದ್ದರು. ಇದೀಗ ಭ್ರಮೆ ಕಳೆಚಿದೆ. ರಾಜ್ಯದಲ್ಲಿ ರೈತ, ಬಡವರ, ಜನವಿರೋಧಿ ಭ್ರಷ್ಟ ಸರ್ಕಾರ ಆಡಳಿತ ನಡೆಸುತ್ತಿದೆ. ರಾಜ್ಯದ ಖಜಾನೆಗಳು ಖಾಲಿ ಆಗಿದ್ದು, ಗ್ಯಾರಂಟಿಗಳು ಜನರಿಗೆ ತಲುಪುತ್ತಿಲ್ಲ ಎಂದು ಆರೋಪಿಸಿದರು.
೨೦೦ ಮನೆಗಳಿರುವ ಗ್ರಾಮದಲ್ಲಿ ೨೦ ಮನೆಗೆ ಗ್ಯಾರಂಟಿ ತಲುಪಿವೆ. ಬರೀ ಜಾಹೀರಾತಿನಲ್ಲಿ ಬರುತ್ತಿವೆ. ಹಲವು ಬಾರಿ ಬಜೆಟ್ ಮಂಡಿಸಿದ್ದ ಅನುಭವಿ ಸಿಎಂ ಸಿದ್ದರಾಮಯ್ಯ ಸಂಪೂರ್ಣ ವಿಫಲರಾಗಿದ್ದಾರೆ. ೧೦ ಕೆ.ಜಿ.ಅಕ್ಕಿ ಎಂದು ಭರವಸೆ ನೀಡಿದ್ರು, ಒಂದು ಕೆ.ಜಿ.ಯೂ ಕೊಡುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಗರೀಬ್ ಕಲ್ಯಾಣ್ ಯೋಜನೆಯ ಅಕ್ಕಿ ರಾಜ್ಯದ ಬಡವರ ಹೊಟ್ಟೆ ತುಂಬಿಸುತ್ತಿದೆ. ಗ್ಯಾರಂಟಿ ಯೋಜನೆಗಳು ಪೊಳ್ಳು ಎನ್ನುವುದು ಸಾಬೀತಾಗಿದೆ ಎಂದು ಹೇಳಿದರು.
ಅಂಬೇಡ್ಕರ್ ಬಗ್ಗೆ ಮಾತಾಡುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ: ಎಲ್ಲ ಇಲಾಖೆಗಳ ಬಗ್ಗೆ ಮಾತನಾಡುವ ಸಚಿವ ಪ್ರಿಯಾಂಕ್ ಖರ್ಗೆ ಸೇರಿ ಕಾಂಗ್ರೆಸ್‌ಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಅವರನ್ನು ಲೋಕಸಭೆ ಚುನಾವಣೆಯಲ್ಲಿ ಸೋಲಿಸಿದ್ದು, ಅವರಿಗೆ ದೆಹಲಿಯಲ್ಲಿ ೬*೩ ಅಡಿ ಅಂತ್ಯಕ್ರಿಯೆಗೆ ಜಮೀನು ನೀಡದೆ ಮೋಸ ಮಾಡಿದ್ದು, ಕಾಂಗ್ರೆಸ್. ಈ ಬಗ್ಗೆ ಪ್ರಿಯಾಂಕ್ ಖರ್ಗೆ ಸೋನಿಯಾ ಗಾಂಧಿ ಬಳಿ ಕೇಳಿ ಉತ್ತರ ನೀಡಲಿ ಎಂದು ಸಲಹೆ ನೀಡಿದರು.
ನಗರಾಧ್ಯಕ್ಷ ಚಂದು ಪಾಟೀಲ್, ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಪದಗ್ರಹಣ ಸ್ವೀಕರಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ, ಕಾರ್ಯದರ್ಶಿಗಳಾದ ಬಸವರಾಜ ಮತ್ತಿಮಡು, ಡಾ.ಶೈಲೇಂದ್ರ ಬೆಲ್ದಾಳೆ, ಸಂಸದ ಡಾ.ಉಮೇಶ ಜಾಧವ, ಶಾಸಕ ಡಾ.ಅವಿನಾಶ ಜಾಧವ್, ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ.ಪಾಟೀಲ್, ಶಶೀಲï ಜಿ. ನಮೋಶಿ, ಸುನೀಲï ವಲ್ಲಾö್ಯಪುರೆ, ಪ್ರಮುಖರಾದ ರಾಜಕುಮಾರ ಪಾಟೀಲ್ ತೇಲ್ಕೂರ್, ರಾಜುಗೌಡ, ಶೋಭಾ ಬಾಣಿ, ವಿಶಾಲ ದರ್ಗಿ, ಶಿವಾನಂದ ಪಿಸ್ತಿ, ಮಾಲೀಕಯ್ಯ ಗುತ್ತೇದಾರ, ದತ್ತಾತ್ರೇಯ ಪಾಟೀಲ್ ರೇವೂರ, ಸಿz್ದÁಜೀ ಪಾಟೀಲ್, ಅವ್ವಣ್ಣ ಮ್ಯಾಕೇರಿ, ಅಮರನಾಥ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net