ಕೇವಲ 5 ರೂ.ಗಾಗಿ ಬಾಲಕನ ಕೊಲೆ

h2- Nadim murder
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಕೇವಲ 5 ರೂ. ಕೇಳಿದ ಬಾಲಕನನ್ನು ಇಲ್ಲಿನ ಮಿಲ್ಲತ್ ನಗರದಲ್ಲಿ ಇತ್ತೀಚೆಗೆ ಕೊಲೆ ಮಾಡಲಾಗಿದ್ದು, ಕೊಲೆ ಆರೋಪಿ ಸೆಟ್ಲಮೆಂಟ್ ನಿವಾಸಿ ರವಿ ವೆಂಕಟೇಶ ಬಳ್ಳಾರಿ ಎಂಬಾತನನ್ನು ಭಾನುವಾರ ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಿಲ್ಲತ್ ನಗರದ ಆಟದ ಮೈದಾನದ ಬಳಿ ಆಟವಾಡುತ್ತಿದ್ದ ಬಾಲಕ ನದೀಮ್ ರವಿ ಬಳ್ಳಾರಿಗೆ 5 ರೂ. ಕೊಡು ಎಂದಿದ್ದ. ಆಗ ರವಿ ಬಾಲಕನಿಗೆ 5 ರೂ. ಕೊಟ್ಟಿದ್ದ. ಇನ್ನೂ 5 ರೂ. ಕೊಡು ಎಂದು ಬಾಲಕ ದುಂಬಾಲು ಬಿದ್ದಿದ್ದ. ರವಿ ಹಣ ಕೊಡದೇ ಇದ್ದಾಗ ನದೀಮ್ ಬೈದಿದ್ದಾನೆ. ಇದರಿಂದ ಕುಪಿತಗೊಂಡ ರವಿ, ನದೀಮ್ ಕೆನ್ನೆಗೆ ನಾಲ್ಕೇಟು ಬಾರಿಸಿದ್ದಾನೆ. ಪರಿಣಾಮ ನದೀಮ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ನೆಲಕ್ಕೆ ಬಿದ್ದ ಬಾಲಕ ಮೇಲೇಳದೇ ಇದ್ದಾಗ, ಶವವನ್ನು ಮೈದಾನ ಬಳಿಯ ಪೊದೆಯಲ್ಲಿ ಎಸೆದಿದ್ದಾನೆ. ತನ್ನ ಮೇಲೆ ಅನುಮಾನ ಬರಬಾರದು ಎಂದು ಬಾಲಕನ ಬಟ್ಟೆ ಬಿಚ್ಚಿ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಪೈಶಾಚಿಕ ಕೃತ್ಯ ಮೆರೆದು ಅಲ್ಲಿಂದ ಕಾಲ್ಕಿತಿದ್ದಾನೆ.

ಪ್ರಕರಣವನ್ನು 48 ಗಂಟೆಗಳಲ್ಲಿ ಭೇದಿಸಿರುವ ಪೊಲೀಸರ ಮುಂದೆ ಆರೋಪಿ ರವಿ ಬಳ್ಳಾರಿ, ಈ ವಿಷಯವನ್ನು ವಿವರವಾಗಿ ತಿಳಿಸಿ ತಪ್ಪೊಪ್ಪಿಕೊಂಡಿದ್ದಾನೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಡಿಗೇರಿ ಠಾಣೆ ಪೊಲೀಸರು, ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ. ಪೊಲೀಸ್ ಠಾಣೆಗೆ ಆಗಮಿಸಿದ ನದೀಮ್ ಕುಟುಂಬಸ್ಥರು, ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net