ಕೇಳುವುದು ತಪ್ಪಲ್ಲ, ಕೇಳಿದ್ದ ರೀತಿ ತಪ್ಪಾಗಿತ್ತು

kannada rajyothsava (12)--04
Published on

ಚಿತ್ರದುರ್ಗ:ವಿಚಾರಗಳಿದ್ದರೆ ಮತದಾರರು ಮನೆಗೆ ಬಂದು ಕೇಳುವುದು ತಪ್ಪಲ್ಲ, ಆದರೆ ಅವರು ಕೇಳಿದ ರೀತಿ ತಪ್ಪಾಗಿತ್ತೆಂದು ಚಿತ್ರದುರ್ಗ ಶಾ ಸಕ ಕೆ.ಸಿ.ವೀರೇಂದ್ರಪಪ್ಪಿ ಹೇಳಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಗರು ಕಾಳಗಕ್ಕೆ ಪೊಲೀಸ ರು ಅನುಮತಿ ಕೊಡದ ಕಾರಣಕ್ಕೆ ಕೆಲವರು, ಚಳ್ಳಕೆರೆ ನನ್ನ ನಿವಾಸಕ್ಕೆ ತಡರಾತ್ರಿ ಬಂದು ಗಲಾಟೆ ಮಾಡಿದ್ದಾರೆ, ಕಾವಲುಗಾರನ ಮೇಲೆ ಹಲ್ಲೆಯಾಗಿದೆ. ಈ ಸಂಬಂಧ ದೂರು ಕೂಡ ದಾಖಲಾಗಿದೆ. ಅವೇಳೆಯಲ್ಲಿ ನಡೆದ ಈ ಘಟನೆ ಬಗ್ಗೆ, ಮನೆಯೊಳಗೆ ಇದ್ದವರಿಗೆ ಗೇಟ್ ಬಳಿ ಏನಾಯಿತು ಎಂಬುದು ಗೊತ್ತಾಗಿರಲಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net