

ಕಲಬುರಗಿ: ಕೇಳಿದ ಬೆಲೆಗೆ ಪ್ಲಾಟ್ ನೀಡಿಲ್ಲ ಎಂದು ಮಾಲಿಕನ ಮೇಲೆ ಹಲ್ಲೆ ಮಾಡಿದ ಟನೆ ನಗರದ ಹೊರವಲಯದ ಕೋಟನೂರ ಡಿ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ. ಬ್ರಹ್ಮಪುರದ ಸಮತಾ ಕಾಲನಿ ನಿವಾಸಿ ಭೀಮಾಶಂಕರ ಅಸಾಂಗಳ ಹಲ್ಲೆಗೆ ಒಳಗಾದವರು. ಶಿವಶರಣ ಅಲಿಯಾಸ ಚಾಕಲೇಟ್ ಶರಣು, ಸಿದ್ದಪ್ಪ, ನಾಗು ಅಲಿಯಾಸ್ ಕುರಿನಾಗು ಸೇರಿ ಇತರರು ವಿರುದ್ಧ ಹಲ್ಲೆ ಮಾಡಿದ ಆರೋಪಿಗಳು. ಭೀಮಾಶಂಕರ್ಗೆ ರಾಮಮಂದಿರ ಸಮೀಪ ಸ್ವಂತ ನಿವೇಶನವಿದ್ದು, ಅದರ ಮಾರಾಟಕ್ಕೆ ಶಿವಶರಣನಿಗೆ ತಿಳಿಸಿದ್ದು, ಎರಡು ತಿಂಗಳ ಹಿಂದೆ ೧೨ ಲಕ್ಷ ರೂ.ಗೆ ಕೇಳಿದ್ದ. ನಿರಾಕರಿಸಿ ೩೬ ಲಕ್ಷ ರೂ.ಗೆ ನೀಡುವುದಾಗಿ ಹೇಳಿದ್ದ. ಜೂ.೯ರಂದು ಕರೆ ಮಾಡಿ ಕರೆಸಿ, ಬೈಕ್ ಮೇಲೆ ಕೂಡಿಸಿಕೊಂಡು ಕೋಟನೂರ (ಡಿ) ಗ್ರಾಮದ ಮಠದ ಹಿಂಬದಿ ಕರೆದೊಯ್ದು, ಕೇಳಿದ್ದ ಬೆಲೆಗೆ ನೀಡು ತಲವಾರ್, ಬಡಿಗೆಯಿಂದ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದು, ವಿವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.