ಕೇರಳಾಪುರದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವ

29ark2
module: NormalModule; touch: (0.38194445, 0.38194445); modeInfo: ; sceneMode: Auto; cct_value: 0; AI_Scene: (-1, -1); aec_lux: 139.0;
Published on

ಅರಕಲಗೂಡು: ತಾಲೂಕಿನ ಕೇರಳಾಪುರದಲ್ಲಿ ಭಾನುವಾರ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವವನ್ನು ಆಚರಿಸಲಾಯಿತು.

ಒಕ್ಕಲಿಗರ ಯುವಕರ ಸಂಘ ಹಾಗೂ ಒಕ್ಕಲಿಗ ಸಮುದಾಯದ ಸಹಯೋಗದಲ್ಲಿ ಗ್ರಾಮದ ವೃತ್ತದಲ್ಲಿ ಕೆಂಪೇಗೌಡರ ಬೃಹತ್ ಭಾವಚಿತ್ರಕ್ಕೆ ಗ್ರಾಮಸ್ಥರು ಪುಷ್ಪಾರ್ಚನೆ ಮಾಡಿದರು. ಜನತೆಗೆ ಅನ್ನಸಂತರ್ಪಣೆ ಮಾಡಲಾಯಿತು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಂತೋಷ್‌ಗೌಡ ಮಾತನಾಡಿ, ಸಿಲಿಕಾನ್ ಸಿಟಿ ಬೆಂಗಳೂರು ವಿಶ್ವದಲ್ಲೇ ಹೆಚ್ಚು ಪ್ರಸಿದ್ಧಿಯಾಗಿದ್ದು, ಇದಕ್ಕೆ ಅಡಿಪಾಯ ಹಾಕಿದ ಕೆಂಪೇಗೌಡರ ದೂರದೃಷ್ಟಿ ಕಾರಣವಾಗಿದೆ. ಉತ್ತಮ ಆಡಳಿತಗಾರರಾಗಿದ್ದ ಕೆಂಪೇಗೌಡರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ಕರೀಗೌಡ, ಮಂಜುನಾಥ್, ಜ್ಯೋತಿ ಕುಮಾರ್, ಉಪಾಧ್ಯಕ್ಷೆ ನಾಗಮಣಿ, ಸದಸ್ಯರಾದ ಶಿವು, ಕೃಷ್ಣ, ಪಿಎಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಕೆ.ಎಚ್.ಶಂಕರ್, ಕುಮಾರ್, ಪಿಎಸಿಸಿ ಸದಸ್ಯ ಸಚಿನ್, ಮುಖಂಡರಾದ ರಾಮಚಂದ್ರಣ್ಣ, ವೆಂಕಟೇಶ್, ಚಂದ್ರು, ಯೋಗೇಶ್, ದೇವೇಗೌಡ, ನಾಗೇಶ್, ಮಿರ್ಲೆ ರಂಗಸ್ವಾಮಿ, ಪುನಿ, ಸಚಿನ್, ಅಶೋಕ್, ಸ್ವಾಮಿ, ದಿವಾಕರ್, ಮಧು, ಎನ್.ಎಸ್.ಮಂಜುನಾಥ್, ಗುರು, ಅಜಯ್, ಜಯರಾಂ, ಸಂಜಯ್, ಕೀರ್ತಿ, ದಿನೇಶ್, ನಾಗೇಶ್, ಶಿಕ್ಷಕ ಷಣ್ಮುಖ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net