

ಯಾದಗಿರಿ: ಗಿರಿಜಿ¯್ಲೆಯ ಕನ್ನಡಿಗರು ಬಹುದೂರ ಉತ್ತರಾಖಂಡದ ಜಗತ್ ಪ್ರಸಿದ್ಧ ಕೇದಾರನಾಥ ಮತ್ತು ಬದರಿನಾಥ ದೇವಸ್ಥಾನದ ನೆಲದಲ್ಲಿ ಕನ್ನಡದ ಧ್ವಜ ಹಾರಿಸಿ ಸಂಭ್ರಮಿಸಿz್ದÁರೆ.
ತಾಲೂಕಿನ ಯರಗೋಳ ಗ್ರಾಮದ ಕನ್ನಡ ತಾಯಿ ಭುವನೇಶ್ವರಿ ಸೇವಾ ಸಮಿತಿ ಅಧ್ಯP್ಷÀ ಶಿವಕುಮಾರ ಮಾನೇಗಾರ ನೇತೃತ್ವದಲ್ಲಿ ಒಟ್ಟು ಎಂಟು ಜನ ಕನ್ನಡಿಗರು ಕಳೆದ ಜು.೧೫ರಂದು ಇಲ್ಲಿಂದ ಅಲ್ಲಿಗೆ ದರ್ಶನಕ್ಕೆ ತೆರಳಿದ್ದು, ಈ ಎರಡು ಪವಿತ್ರ ನೆಲದಲ್ಲಿ ಮೂರು ದಿನಗಳ ಕಾಲ ತಾವು ಹೋದಲ್ಲಿ ಕನ್ನಡ ಧ್ವಜಗಳನ್ನು ಬಾನೆತ್ತರಕ್ಕೆ ಹಾರಿಸುತ್ತ ಕನ್ನಡ ಮಾತೆ ಹೆಸರಲ್ಲಿ ಜೈಘೊಷ ಮೊಳಗಿಸಿ ಅಲ್ಲಿನ ಜನರಿಗೆ ಅಚ್ಚರಿ ಮೂಡಿಸಿದ್ದಾರೆ.
ಈ ಬಗ್ಗೆ ಕೇದಾರನಾಥ ಬಳಿಯಿಂದ ಪ್ರತಿಕ್ರಿಯೆ ನೀಡಿರುವ ಯರಗೋಳದ ಶಿವಕುಮಾರ ಮಾನೇಗಾರ, ಈ ಎರಡು ದೇವಸ್ಥಾನಗಳು ಜಗತ್ತಿಗೆ ಹೆಸರುವಾಸಿ. ಇಲ್ಲಿನ ಈ ಎರಡು ಕಡೆ ಕಳೆದ ಸುಮಾರು ೩೩೨ ವರ್ಷಗಳಿಂದ ಮೂಲತಃ ಕನ್ನಡ ನೆಲದ ಪೂಜಾರಿ, ಆರ್ಚಾರರಿಂದಲೇ ನಿತ್ಯವೂ ಪೂಜೆ ಸೇರಿ ಪ್ರಮುಖ ಧಾರ್ಮಿಕ ಕಾರ್ಯ ನಡೆಯುತ್ತಿವೆ. ಇದು ಅಲ್ಲಿನ ಗುರುಗಳಿಂದ ನಮಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಆ ನೆಲದಲ್ಲಿ ಕನ್ನಡದ ಧ್ವಜ ರಾರಾಜಿಸಿz್ದÉವೆ ಎಂದು ಹೇಳಿದರು.
ಈ ವೇಳೆ ಅಲ್ಲಿನ ಪ್ರಧಾನ ಅರ್ಚಕರಿಗೆ ಕನ್ನಡದ ಶಾಲು ಹೊದಿಸಿ ತಾಯಿ ಭುವನೇಶ್ವರಿ ಭಾವಚಿತ್ರ ನೀಡಿ ಗೌರವಿಸಲಾಗಿದೆ ಎಂದರು. ಈ ವೇಳೆ ಮಹ್ಮದ್ ಪಾಠಕ್, ಕಾಶೀನಾಥ ಚಡಬೋ, ಲಕ್ಷಿö್ಮÃಕಾಂತ ಕಂಚಗಾರಹಳ್ಳಿ, ಆಕಾಶ ರಾಠೋಡ ಭಂಕೂರ್, ಮಲ್ಲಿಕಾರ್ಜುನ ಸಾಹುಕಾರ ಹುಳ್ಳೆಸೂಗುರು, ಗಣೇಶ ಚವ್ಹಾಣ್ ನಾಲವಾರ, ಬಸಯ್ಯ ಸ್ವಾಮಿ ಇದ್ದರು.