

ದಾವಣಗೆರೆ:ಬಂಬೂ ಬಜಾರ್‌ನಲ್ಲಿ ಮೇದಾರ ಸಮಾಜದ ವತಿಯಿಂದ 50ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಬಿದಿರಿನಿಂದ ನಿರ್ಮಿಸಿರುವ ಶ್ರೀ ಕೇದಾರನಾಥ ದೇವಾಲಯ ಮಾದರಿಯ ಮಂಟಪವನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಶನಿವಾರ ವೀಕ್ಷಿಸಿದರು.
ನಂತರ ಮಾತನಾಡಿ ಸ್ವಾತಂತ್ರ್ಯ ಪೂರ್ವದಲ್ಲಿ ಬಾಲಗಂಗಾಧರ ತಿಲಕ್ ಅವರು ಯುವಕರ ಮತ್ತು ಸಮಾಜವನ್ನು ಒಗ್ಗೂಡಿಸಲು ಗಣೇಶೋತ್ಸವವನ್ನು ಆರಂಭಿಸಿದ್ದರು. ಇದೀಗ ದಾವಣಗೆರೆ ಮೇದಾರ ಸಮಾಜ ನಿರ್ಮಿಸಿದ ಕೇದಾರನಾಥ ಮಂಟಪವು ಸಮಾಜದ ಒಗ್ಗಟ್ಟಿಗೆ ಹಿಡಿದ ಕೈಗನ್ನಡಿಯಾಗಿದ್ದು, ತಿಲಕರ ಕನಸು ಸಾಕಾರವಾಗಿದೆ ಎಂದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಸಮಾಜದ ಅಧ್ಯಕ್ಷ ಟಿ.ಬಸವರಾಜ, ತಿಮ್ಮಣ್ಣ, ಸಂಡೂರು, ಗಿರೀಶ್ ಎಚ್.ಯು, ಶ್ರೀನಿವಾಸ್ ಟಿ., ನಾಗರಾಜ ಕೆ., ಯುವ ವೇದಿಕೆ ಅಧ್ಯಕ್ಷ ಎಚ್. ರಾಘವೇಂದ್ರ, ಉಮೇಶ್ ಜಿ., ಪ್ರಕಾಶ್ ಜಿ., ನರೇಂದ್ರ, ಯಲ್ಲೇಶ್, ಸೋಮಶೇಖರ್ ಸಿ.ಬಿ., ಶಿವಕುಮಾರ್ ಇತರರಿದ್ದರು.
---