ಕೇಕ್ ಮಾರಾಟ ಜೋರು

IMG-20221231-WA0182
Published on

ಆಲೂರು: ಹೊಸ ವರ್ಷದ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧ ಬೇಕರಿಗಳಲ್ಲಿ ಶನಿವಾರ ದಿನವಿಡಿ ಕೇಕ್ ಮಾರಾಟ ಭರ್ಜರಿಯಾಗಿ ನಡೆಯಿತು.

ನಾನಾ ಬಗೆಯ ಕೇಕ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ನೋಡುಗರ ಕಣ್ಮನ ಸೆಳೆದವು. ವೆನಿಲಾ, ಚಾಕಲೇಟ್, ರೆಗ್ಯುಲರ್, ಫೆಸ್ಟಿವ್ ಕೋಲ್ಡ್ ಸೇರಿ ಬಗೆ ಬಗೆಯ ಕೇಕ್‌ಗಳಿದ್ದವು. ಸಾಧಾರಣ ಒಂದು ಕೆಜಿ ಕೇಕ್‌ಗೆ 200 ರೂ. ಇದ್ದರೆ, ಶನಿವಾರ 300 ರೂ.ಯಿಂದ 400 ರೂ.ವರೆಗೂ ಮಾರಾಟವಾದವು.


ಪ್ರತಿ ವರ್ಷವೂ ಹೊಸ ವರ್ಷಾಚರಣೆಗೆಂದೇ ವಿಶೇಷ ಬಗೆಯ ಕೇಕ್‌ಗಳನ್ನು ತಯಾರಿಸಲಾಗುವುದು. ಬೇಡಿಕೆಯೂ ಸಾಕಷ್ಟಿದೆ. ರುಚಿ, ರುಚಿಯಾದ ಕೇಕ್‌ಗಳನ್ನು ಜನ ಬಹಳ ಇಷ್ಟಪಡುತ್ತಾರೆ ಎಂದು ಆಲೂರು ಕೊನೆಪೇಟೆ ಬನಶಂಕರಿ ಬೇಕರಿ ಮಾಲೀಕ ಲಕ್ಕಶೆಟ್ಟಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net