ಕೇಂದ್ರೀಯ ವಿದ್ಯಾಲಯ ಸ್ಥಾಪನೆ ವಿಳಂಬ ಯಾಕೆ?

dip--mp
Published on

ಚಿತ್ರದುರ್ಗ:ಮೊದಲ ಬಾರಿಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸಂಸತ್ ಪ್ರವೇಶಿಸಿರುವ ಮಾಜಿ ಡಿಸಿಎಂ ಗೋವಿಂದ ಎಂ. ಕಾರಜೋಳ ಅವರು,18ನೇ ಅಧಿವೇಶನದ ಪ್ರಥಮ ಕಲಾಪದಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ಮೊದಲನೆಯ ಪ್ರಶ್ನೆ ಕೇಳಿದ್ದಾರೆ.
ಕಳೆದ ಐದು ವರ್ಷಗಳ ಅವಧಿ ಕರ್ನಾಟಕದಲ್ಲಿ ಹೊಸದಾಗಿ ಸ್ಥಾಪನೆಯಾದ ಕೇಂದ್ರಿಯ ವಿದ್ಯಾಲಯಗಳ ಸಂಖ್ಯೆ,ಚಿತ್ರದುರ್ಗದ ಕುಂಚಿ ಗನಾಳ್‌ನಲ್ಲಿ ಕೇಂದ್ರಿಯ ವಿಶ್ವವಿದ್ಯಾಲಯ ಸ್ಥಾಪನೆ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದೆದಿಯೇ? ಇಲ್ಲಿ ಈ ವಿದ್ಯಾಲಯ ಸ್ಥಾಪನೆಯ ವಿ ಳಂಬಕ್ಕೆ ಕಾರಣಗಳೇನು?ಎಂಬ ಪ್ರಶ್ನೆಗಳೊಂದಿಗೆ ಕರ್ನಾಟಕದಲ್ಲಿರುವ ಕೇಂದ್ರಿಯ ವಿದ್ಯಾಲಯಗಳ ಜಿಲ್ಲಾವಾರು ಸಂಖ್ಯೆ,ಹಂಚಿಕೆಯಾದ ಅನುದಾನದ ಸಮಗ್ರ ಮಾಹಿತಿಯನ್ನು ಕಾರಜೋಳ ಅವರು ಸಂಬಂಧಿಸಿದ ಕೇಂದ್ರ ಸಚಿವರಿಂದ ಕೋರಿದ್ದಾರೆ.
ಚಿತ್ರದುರ್ಗ ದೇಶದಲ್ಲಿಯೇ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು,ಕಾಡುಗೊಲ್ಲ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ,ಈ ಸ ಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರೀಯ ವಿದ್ಯಾಲಯ ಆರಂಭಕ್ಕೆ ತ್ವರಿತ ಕ್ರಮ ಕೈಗೊಳ್ಳ ಬೇ ಕೆಂದು ಅವರು ಪಾರ್ಲಿಮೆಂಟ್‌ನಲ್ಲಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net