ಕೇಂದ್ರೀಯ ವಿದ್ಯಾಲಯ ಶೀಘ್ರ ಪ್ರಾರಂಭ

16Athni1
Published on

ಅಥಣಿ: ಶಿಕ್ಷಣ ಸಂಸ್ಥೆಗಳು ಹೆಚ್ಚಾದಂತೆ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಅದರಂತೆ ಗುಣಮಟ್ಟದ ಶಿಕ್ಷಣ ನೀಡುವುದು ಸಂಸ್ಥೆಗಳ ಜವಾಬ್ದಾರಿ ಹೆಚ್ಚಿಸುತ್ತದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದ ಸಂಗಮನಾಥ ಎಜುಕೇಷನ್ ಮತ್ತು ಸೋಸಿಯಲ್ ವೆಲೇರ್ ಫೌಂಡೇಷನ್ ವತಿಯಿಂದ ಈಚೆಗೆ ಯುರೋಕಿಡ್ಸ್ ಶಾಲೆ ಉದ್ಘಾಟಿಸಿ ಮಾತನಾಡಿದರು. ಉತ್ತಮ ಶಿಕ್ಷಣ ನೀಡಿ ಮಕ್ಕಳನ್ನು ವಿದ್ಯಾವಂತರಾಗಿ ಮಾಡಿದರೆ ಉತ್ತಮ ಭವಿಷ್ಯ ಕಟ್ಟಿಕೊಳ್ಳುತ್ತಾರೆ. ಶಿಕ್ಷಣದಿಂದ ಸಮಾಜ ಬದಲಾಗುತ್ತದೆ. ತಂತ್ರಜ್ಞಾನ ಹೆಚ್ಚಾದಂತೆ ಜನರು ಉದ್ಯೋಗ ಕಳೆದುಕೊಳುತ್ತಿದ್ದಾರೆ. ಈಗಿನ ತಂತ್ರಜ್ಞಾನದ ಪ್ರಕಾರ ಶಿಕ್ಷಣ ಕಲಿಯಬೇಕಾಗಿದೆ. ಕ್ಷೇತ್ರದಲ್ಲಿ ಒಳ್ಳೆಯ ಶಿಕ್ಷಣ ಸಿಗುವ ನಿಟ್ಟಿನಲ್ಲಿ ಅಥಣಿಗೆ ಕೇಂದ್ರೀಯ ವಿದ್ಯಾಲಯ ತರಲಾಗಿದೆ. ಅದು ಈ ವರ್ಷವೇ ಪ್ರಾರಂಭವಾಗುತ್ತದೆ ಎನ್ನುವ ಆಶಯವಿದೆ. ಮಠಾದೀಶರು ಹಾಗೂ ಶಿಕ್ಷಣಪ್ರಿಯರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಶಿಕ್ಷಣದ ಜತೆಗೆ ಸಂಸ್ಕಾರ ನೀಡುವ ಕೆಲಸ ಮಾಡುತ್ತಿದ್ದಾರೆ. ಮಕ್ಕಳಿಗೆ ಬದುಕುವ ದಾರಿ ಕಲಿಸಬೇಕು, ಮಾನವೀಯ ಮೌಲ್ಯಗಳನ್ನು ಶಿಕ್ಷಣ ಸಂಸ್ಥೆಗಳು ಮಕ್ಕಳಲ್ಲಿ ತುಂಬಬೇಕು ಎಂದರು.

ಕೌಲಗುಡ್ಡದ ಅಮರೇಶ್ವರ ಮಹಾರಾಜರು, ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ, ಪೂರ್ಣಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಯುರೋ ಕಿಡ್ಸ್ ಕರ್ನಾಟಕ ವಿಭಾಗದ ವಿನೋದ ರೆಡ್ಡಿ ಮಾತನಾಡಿ ಯುರೋಕಿಡ್ಸ್ ಶಾಲೆಯ ಬಗ್ಗೆ ಮಾಹಿತಿ ನೀಡಿದರು.

ಸಂಸ್ಥೆಯ ಕಾರ್ಯದರ್ಶಿ ಮಲ್ಲೇಶ ಸವದಿ, ಖಜಾಂಚಿ ಶಿವಾನಂದ ಸವದಿ, ಗಣ್ಯರಾದ ಶಂಕರ ನಂದೇಶ್ವರ, ಚಿದಾನಂದ ಸವದಿ, ವಿವೇಕ ನಾರಗೊಂಡ, ಬಾಳೇಶ ಸವದಿ, ಕೆ.ಎ.ವನಜೋಳ, ಅರುಣ ಯಲಗುದ್ರಿ, ಸುರೇಶ ಠಕ್ಕಣವರ, ರಮೇಶ ಭೋಸಲೆ, ಚೇತನ ಸವದಿ, ರಾಜು ಕಾಗೆ ಇತರರು ಇದ್ದರು.ಸಂಗಮನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪರಪ್ಪ ಸವದಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net