ಕೇಂದ್ರದ ವಿರುದ್ಧ ಕಿಸಾನ್ ಸಭಾ ಅಸಮಾಧಾನ

PHOTO-2--04
Published on

ಚಿತ್ರದುರ್ಗ: ಹಲವು ಹೊರ ದೇಶಗಳಿಗೆ ಸರಬರಾಜು ಮಾಡಲು ಸಾಕಷ್ಟು ಆಹಾರ ದಾಸ್ತಾನು ನಮ್ಮ ದೇಶದಲ್ಲಿದ್ದರೂ ಕರ್ನಾಟಕಕ್ಕೆ ಅಕ್ಕಿ ಕೊಡಲು ದಾಸ್ತಾನಿಲ್ಲವೆಂದು ಆಹಾರ ನಿಗಮದ ಹೇಳಿಕೆ ವಿರೋಧಿಸಿ ಅಖಿಲ ಭಾರತ ಕಿಸಾನ್ ಸಭಾ ಪ್ರಮುಖರು ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ರಾಜ್ಯದ ಬಡವರಿಗೆ ಹೆಚ್ಚುವರಿಯಾಗಿ 1.66 ಲಕ್ಷ ಟನ್ ಅಕ್ಕಿಯನ್ನು ಪ್ರತಿ ಕೆ.ಜಿ.ಗೆ 34 ರೂ.ನಂತೆ ಖರೀದಿಸಲು ರಾಜ್ಯಸರ್ಕಾರ ಕೇಳುತ್ತಿದ್ದರು ದಾಸ್ತಾನಿಲ್ಲವೆಂದು ಹೇಳುವ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕರಾಳ ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯು ವಂತೆ ರಾಜ್ಯಸರ್ಕಾರವನ್ನು ಒತ್ತಾಯಿಸಿದರು. ಕಿಸಾನ್‌ಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಸುರೇಶ್‌ಬಾಬು,ಎಂ.ಬಿ.ಜಯ ದೇವಮೂರ್ತಿ,ಸತ್ಯಕೀರ್ತಿ,ಎಸ್.ಬಾಬು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net