ಕೇಂದ್ರದ ಯೋಜನೆಗೆ ರಾಜ್ಯ ಸರ್ಕಾರ ಅಸಹಕಾರ

DSC_0764
Published on

ಕಲಬುರಗಿ: ಕಲ್ಯಾಣ ರ‍್ನಾಟಕ ಭಾಗಕ್ಕೆ ೧೩ ಸಾವಿರ ಕೋಟಿ ರೂ. ರ‍್ಚು ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ ಅಭಿವೃದ್ಧಿ ಮರಿಚಿಕೆಯಾಗಿದ್ದು, ಕೆಕೆಆರ್​ಡಿಬಿ ಸೇರಿ ಈ ಭಾಗಕ್ಕೆ ರ‍್ಚು ಮಾಡಿದ ಅಭಿವೃದ್ಧಿ ಕುರಿತು ರಾಜ್ಯ ರ‍್ಕಾರ ಶ್ವೇತ ಪತ್ರ ಹೊರಡಿಸಲಿ ಎಂದು ಜೆಡಿಯ ಯುವ ಟಕದ ಅಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಹೇಳಿದರು.

ಕೆಕೆಆರ್​ಡಿಬಿ ಅನುದಾನ ಲ್ಯಾಂಡ್​ ರ‍್ಮಿಗೆ ಹೋಗುತ್ತಿದೆ. ಈ ಭಾಗದಲ್ಲಿ ಎಲ್ಲಿ ಅಭಿವೃದ್ಧಿ ಆಗಿದೆ ತಿಳಿಸಲಿ. ಕಲಬುರಗಿ ಜಿಲ್ಲೆಯಲ್ಲಿ ಮರಳು ಮಾಫಿಯಾಕ್ಕೆ ಈ ಭಾಗದ ನಾಯಕರೇ ಸಾಥ್​ ನೀಡುತ್ತಿದ್ದಾರೆ. ಎಸ್ಸೆಸ್ಸೆಲ್ಸಿ ಲಿತಾಂಶ ಕಳಪೆಯಾಗಿದೆ. ಶೈಕ್ಷಣಿಕ ಗುಣಮಟ್ಟ ಕುಸಿದಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಯುವಕರಿಗೆ ಅವಕಾಶ ನೀಡುತ್ತಿದ್ದು, ಜಿಪಂ, ತಾಪಂ ಚುನಾವಣೆ ನಡೆದರೆ ಹೊಸಬರಿಗೆ ಅನುಕೂಲವಾಗಲಿದೆ. ಆದರೆ ಚುನಾವಣೆ ನಡೆಯುವ ನಂಬಿಕೆಯೇ ಉಳಿದಿಲ್ಲ. ರ‍್ಕಾರಕ್ಕೆ ಚುನಾವಣೆ ನಡೆಸಲು ಆಸಕ್ತಿ ಇಲ್ಲ. ಕ್ರಾಂತಿ ನಡೆಯುವ ಭೀತಿಯಲ್ಲೇ ರ‍್ಕಾರ ನಡೆದಿದೆ ಎಂದರು.

ಶಾಸಕ ಶರಣಗೌಡ ಕಂದಕೂರ ಮಾತನಾಡಿ, ಕುಮಾರಸ್ವಾಮಿ ಹಾಗೂ ದೇವೇಗೌಡರಿಗೆ ಕಲ್ಯಾಣ ರ‍್ನಾಟಕದ ಮೇಲೆ ವಿಶೇಷ ಪ್ರೀತಿ ಇದೆ. ಆದರೆ ನಾವು ಕೇಳಿದ ಕಡೆ ಕೈಗಾರಿಕೆ ನೀಡಲು ಸಾಧ್ಯವಾಗುವುದಿಲ್ಲ. ರಾಜ್ಯ ರ‍್ಕಾರ ಪ್ರಸ್ತಾವನೆ ಸಲ್ಲಿಸಿದರೆ ಕೇಂದ್ರದ ಜತೆ ಕಾಡಿ, ಬೇಡಿ ನಾವು ಕೈಗಾರಿಕೆ ತರುತ್ತೇವೆ ಎಂದು ತಿಳಿಸಿದರು.

ಮಾಜಿ ಸಚಿವರಾದ ವೆಂಕಟರಾವ ನಾಡಗೌಡ, ಅಲ್ಕೋಡ್​ ಹನುಮಂತಪ್ಪ, ಕರ‍್ಯಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್​ ನರಿಬೊಳ, ಜಿಲ್ಲಾಧ್ಯ ಬಾಲರಾಜ್​ ಗುತ್ತೇದಾರ, ಮುಖಂಡರಾದ ಶಿವಕುಮಾರ ನಾಟೀಕಾರ, ಕೃಷ್ಣ ರೆಡ್ಡಿ, ಮಹೇಶ್ವರಿ ವಾಲಿ, ಬಸವರಾಜ ಬಿರಬಿಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net