

ಚಿತ್ರದುರ್ಗ: ಪಿಡಿಒ ಹುದ್ದೆಗಳ ನೇಮಕಾತಿ ಸಂಬಂಧ ಕರ್ನಾಟಕ ಲೋಕಸೇವಾ ಆಯೋಗದಿಂದ ಶನಿವಾರ ಪರೀಕ್ಷೆ ನಡೆಯಿತು. ಆದರೆ, ನಗರದ ಸರ್ಕಾರಿ ಬಾಲಕಿಯರ ಪಪೂ ಕೇಂದ್ರಕ್ಕೆ ಅಂಗವೈಕಲ್ಯ ಯುವತಿಯೊಬ್ಬರು ತಡವಾಗಿ ಬಂದಿದ್ದರಿಂದ ಸಿಬ್ಬಂದಿ ಅವಕಾಶ ನೀಡಲಿಲ್ಲ. ಹೀಗಾಗಿ ಸ್ಥಳದಲ್ಲೇ ಕಣ್ಣೀರು ಸುರಿಸಿದರು.
ಇನ್ನೂ ಜಿಲ್ಲೆಯ ಚಿತ್ರದುರ್ಗದ 28, ಚಳ್ಳಕೆರೆಯ 1 ಸೇರಿ ಒಟ್ಟು 29 ಕೇಂದ್ರಗಳಲ್ಲಿ ನಡೆದ ಕನ್ನಡ ಭಾಷಾ ಪರೀಕ್ಷೆಗೆ ಒಟ್ಟು 10,632 ಮಂದಿ ನೋಂದಾಯಿಸಿದ್ದರು. ಈ ಪೈಕಿ 5,510 ಅಭ್ಯರ್ಥಿಗಳು ಹಾಜರಾಗಿ, 5,122 ಮಂದಿ ಗೈರಾಗಿದ್ದರು.
ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಪ್ರವೇಶಿಸುವ ಮುನ್ನ ಸಿಬ್ಬಂದಿ ತಪಾಸಣೆ ನಡೆಸಿದರು. ಕಿವಿಯೋಲೆ, ಸರಗಳನ್ನು ತೆಗೆಸಿ ಕೇಂದ್ರದೊಳಗೆ ಹೋಗಲು ಅನುವು ಮಾಡಿಕೊಟ್ಟರು.
ಕೇಂದ್ರಗಳಿಗೆ ಎಸಿ ಭೇಟಿ: ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಚಿತ್ರದುರ್ಗದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.