ಕೇಂದ್ರದ ಮಾದರಿ ವೇತನ ಕೊಡಿ

Aurad-1
Published on

ಔರಾದ್: ಕೇಂದ್ರದ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ವೇತನ ನೀಡಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಆಗ್ರಹಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಜರುಗಿದ ನೌಕರರ ಸಂಘದ ಕ್ಯಾಲೆಂಡರ್, ಡೈರಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಕೇಂದ್ರದ ಮಾದರಿ ವೇತನ ಕೊಡುವಂತೆ ಹೋರಾಟ ತೀವ್ರಗೊಂಡಿದೆ. ಬರುವ ಎರಡು ವರ್ಷದೊಳಗೆ ಈ ಬೇಡಿಕೆಯು ಈಡೇರುವ ವಿಶ್ವಾಸವಿದೆ ಎಂದು ಹೇಳಿದರು.

ಸಂಘದ ತಾಲೂಕಾಧ್ಯಕ್ಷ ಶಿವಕುಮಾರ ಘಾಟೆ ಮಾತನಾಡಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ಪವಾರ್ ಉದ್ಘಾಟಿಸಿದರು. ತಹಸೀಲ್ದಾರ್ ಚಂದ್ರಶೇಖರರಾವ, ತಾಪಂ ಇಒ ಮಾಣಿಕರಾವ ಪಾಟೀಲ್, ಸಿಪಿಐ ರವೀಂದ್ರನಾಥ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸಂತೋಷ ಪೋಕಲವಾರ್, ಪ್ರಮುಖರಾದ ರಾಜುಕುಮಾರ ಉದಗೀರೆ, ಶಿವರಾಜ ಕಪಲಾಪುರೆ, ಪಂಢರಿ ಆಡೆ, ಗಜಾನನ ಮಳ್ಳಾ, ಬಸವರಾಜ ಪಾಟೀಲ್, ಅಶೋಕರೆಡ್ಡಿ, ಡಾ.ಶಾಲಿವಾನ ಉದಗೀರೆ ಇತರರಿದ್ದರು. ಔರಾದ್ ಮತ್ತು ಕಮಲನಗರ ತಾಲೂಕಿನ ಪ್ರಾಥಮಿಕ ಶಿಕ್ಷಕ ಸಂಘದ ನೂತನ ಪದಾಧಿಕಾರಿಗಳು ಹಾಗೂ ನಿರ್ದೇಶಕರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net