ಕೇಂದ್ರದ ಪ್ರವಾಹ ಸಮಿತಿ ಆಗಮಿಸಿದ್ದು ಸರಿಯಲ್ಲ - ಬಸವರಾಜ ಮೋಕಾಶಿ

04
Published on

ಎಂ.ಕೆ.ಹುಬ್ಬಳ್ಳಿ: ಮಹದಾಯಿ ನದಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿರುವಾಗ ಕೇಂದ್ರ ಸರ್ಕಾರದ ಪ್ರವಾಹ ಸಮಿತಿ ಮಹದಾಯಿ ನದಿಯ ವಿವಾದಿತ ಸ್ಥಳ ವೀಕ್ಷಣೆಗೆ ಆಗಮಿಸಿರುವ ಕ್ರಮ ಸರಿಯಲ್ಲ ಎಂದು ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷ ಬಸವರಾಜ ಮೋಕಾಶಿ ಹೇಳಿದರು.

ಪಟ್ಟಣದಲ್ಲಿ ರೈತಸಂಘದ ಪದಾಧಿಕಾರಿಗಳೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.ರೈತರ ನಡುವೆ ಗೊಂದಲ ಮತ್ತು ಆತಂಕ ಸೃಷ್ಟಿಸುತ್ತಿರುವ ಕೇಂದ್ರ ಸರ್ಕಾರದ ಪ್ರವಾಹ ಸಮಿತಿಯ ನಡೆ ಖಂಡನೀಯ. ಈ ವಿಷಯದಲ್ಲಿ ರಾಜ್ಯ ಸರ್ಕಾರವೂ ನಿರಾಸಕ್ತಿ ತೋರುತ್ತಿದ್ದನ್ನು ಗಮನಿಸುತ್ತಿದ್ದೇವೆ.

ಇದು ಉತ್ತರ ಕರ್ನಾಟಕ ರೈತರ ವಿರುದ್ಧವಾದ ನಡೆ. ಜು.21ರಂದು ಯರಗಟ್ಟಿಯಲ್ಲಿ ಜರುಗುವ ರೈತ ಹುತಾತ್ಮ ದಿನಾಚರಣೆಯಂದು ಹೋರಾಟ ಮಾಡುವ ಕುರಿತು ಚರ್ಚಿಸುತ್ತಿದ್ದೇವೆಂದು ಮಾಹಿತಿ ನೀಡಿದರು. ಸಂಘದ ಗೌರವಾಧ್ಯಕ್ಷ ಚನ್ನಪ್ಪ ಗಣಾಚಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ಕರವಿನಕೊಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net