

ಚಿತ್ರದುರ್ಗ: ಕೇಂದ್ರ ಸರ್ಕಾರ ಹಿಟ್ ಅಂಡ್ ರನ್ ಪ್ರಕರಣಗಳ ಸಂಬಂಧ ಉದ್ದೇಶಿತ ನೂತನ ಕಾಯ್ದೆ ಜಾರಿಗೊಳಿಸದಂತೆ ಆಗ್ರಹಿಸಿ ಗೂಡ್ಸ್ ಷೆಡ್ ಮಾರ್ಕೆಟ್ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು, ಮಾಲೀಕರು, ಚಾಲಕರು ಚಿತ್ರದುರ್ಗ ಎಪಿಎಂಸಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಸಂಘದ ಅಧ್ಯಕ್ಷ ಮಹಮದ್ ಆಲಿ, ಉಪಾಧ್ಯಕ್ಷ ಭೀಮರಾಜ್, ಪದಾಧಿಕಾರಿಗಳಾದ ಸುಹೇಲ್ ಅಹಮದ್, ವಿಶ್ವನಾಥ್, ಸಲೀಂ ಖಾನ್, ಸಾಧಿಕ್, ಶಫಿ, ವೆಂಕಟೇಶಪ್ಪ, ಕೇಶವ, ಮುಜ್ಜು ಇತರರಿದ್ದರು.