ಕೇಂದ್ರ ಸರಕಾರದ ಸೌಲಭ್ಯ ಪಡೆದುಕೊಳ್ಳಿ

14ydg02
Published on


ಯಾದಗಿರಿ: ಕೇಂದ್ರದಲ್ಲಿ ಸತತ ಒಂಭತ್ತು ವರ್ಷ ಆಡಳಿತ ನಡೆಸುತ್ತಿರುವ ಬಿಜೆಪಿ ಸಕರ್ಾರ ಒಂದೇ ಕಪ್ಪುಚುಕ್ಕೆ ಇಲ್ಲದೆ, ದೇಶದ ಶ್ರೀಸಾಮಾನ್ಯನ ಕಲ್ಯಾಣಕ್ಕೆ ಶ್ರಮಿಸುತ್ತಿದೆ ಎಂದು ಪಕ್ಷದ ಯುವ ನಾಯಕ ಮಹೇಶರಡ್ಡಿ ಮುದ್ನಾಳ್ ತಿಳಿಸಿದರು.

ಗುರುವಾರ ತಾಲೂಕಿನ ಠಾಣಗುಂದಿ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದ ಡಿಜಿಟಲ್ ವಾಹನಕ್ಕೆ ಚಾಲನೆ ನೀಡಿ ಮಾತನಾಡಿ, ಸಕರ್ಾರದ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಯಾತ್ರೆಗೆ ನ.15 ರಂದು ಜಾರ್ಖಂಡ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಇದು ಯಾವುದೇ ಪಕ್ಷದ ಕಾರ್ಯಕ್ರಮವಲ್ಲ. ಕೇಂದ್ರದ ಯೋಜನೆಗಳನ್ನು ಬಡವರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ ಎಂದರು.

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 31 ಗ್ರಾಪಂಗಳಿಗೆ ವಿಕಸಿತ ಭಾರತ ಸಂಕಲ್ಪಯಾತ್ರೆ ಸಂಚರಿಸಿ ಮೋದಿ ಗ್ಯಾರಂಟಿಯಲ್ಲಿ ಬರುವ 17 ಯೋಜನೆಗಳನ್ನು ವೀಡಿಯೋ ಮುಖಾಂತರ ತಿಳಿಸಿ ಹೊಸ ಫಲಾನುಭವಿಗಳ ಆಯ್ಕೆಯೂ ಜರುಗಲಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ವಿಶೇಷವಾಗಿ ರೈತ ಗೀತೆಯೊಂದಿಗೆ ಪ್ರಾರಂಭಿಸಿ, ಪ್ರತಿಜ್ಞಾವಿಧಿ ಓದಿಸಲಾಯಿತು. ಕೊನೆಯಲ್ಲಿ ಧ್ವನಿಮುದ್ರಿತ ಆಡಿಯೋ ಮತ್ತು ವಿಡಿಯೋ ಪ್ರದರ್ಶನ ಜರುಗಿತು ಹಾಗೂ ಯೋಜನೆಯ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net