ಕೇಂದ್ರ ವಿರುದ್ಧ ಎಸ್ಡಿಪಿಐ ಪ್ರತಿಭಟನೆ

5kglphoto-3...
Published on

ಚಾಮರಾಜನಗರ : ದೇಶದಲ್ಲಿ ನಡೆಯುತ್ತಿರುವ ಮತೀಯ ಹಿಂಸಾಚಾರ, ಜನಾಂಗೀಯ ಕಲಹ, ಕೋಮುಗಲಭೆಗಳಿಗೆ ಸಂಘ ಪರಿವಾರ ಹರಡುತ್ತಿರುವ ದ್ವೇಷ ಬೀಜವೇ ಕಾರಣ ಎಂದು ಪಟ್ಟಣದಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಎಸ್‌ಡಿಪಿಐ ತಾಲೂಕು ಅಧ್ಯಕ್ಷ ಜಾಕೀರ್ ಪಾಷ ಹೇಳಿದ್ದಾರೆ.

ಕೊಳ್ಳೇಗಾಲ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಸಮಾವೇಶಗೊಂಡ ಎಸ್‌ಡಿಪಿಐ ಕಾರ್ಯಕರ್ತರು, ಮಣಿಪುರದ ಜನಾಂಗೀಯ ಕಲಹ, ಹರಿಯಾಣದ ಕೋಮುಗಲಭೆ, ಮಹಾರಾಷ್ಟ್ರದಲ್ಲಿ ಆರ್‌ಪಿಎಫ್ ಯೋಧನ ಕೋಮು ದ್ವೇಷದಿಂದ ರೈಲಿನಲ್ಲಿದ್ದ, ಮೂವರು ಅಮಾಯಕರ ಬಲಿ ಸೇರಿದಂತೆ ದೇಶದ ವಿವಿಧ ಕಡೆ ನಡೆಯುತ್ತಿರುವ ಹಿಂಸಾಚಾರಕ್ಕೆ ಬಿಜೆಪಿ ಹಾಗೂ ಸಂಘ ಪರಿವಾರವೇ ಕಾರಣ ಎಂದು ದೂರಿದರು.


ಬಿಜೆಪಿಗೆ ಹಿಂಸಾಚಾರ, ಕೋಮುಗಲಭೆಗಳು ರಾಜಕೀಯ ಅಸ್ತ್ರವಾಗಿವೆ. ಮಣಿಪುರದಲ್ಲಿ ಶಾಂತಿ ನೆಲೆಸುವ ನಿಲ್ಲಿನಲ್ಲಿ ಕೇಂದ್ರ ಸರ್ಕಾರ ಕ್ರಮ ವಹಿಸಿಲ್ಲ ಎಂದು ಆರೋಪಿಸಿದರು. ಎಸ್ಡಿಪಿಐ ಉಪಾಧ್ಯಕ್ಷ ಸೈಯದ್ ಮುಜೀ ಮಿಲ್ಲಾ, ಕಾರ್ಯದರ್ಶಿ ಮಹಮ್ಮದ್ ಇಮ್ರಾನ್, ಖಜಾಂಚಿ ರಿಜ್ವಾನ್, ಟಿಪ್ಪು ಕಮಿಟಿ ಅಧ್ಯಕ್ಷ ಎನ್. ಆರೀಫ್ ಉಲ್ಲಾ, ಮುಖಂಡರಾದ ಅಕ್ರಂ, ಫಾಯಿಕ್ ಅಹಮ್ಮದ್, ಇನಾಯತ್ ಪಾಷ, ಜುನೈದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net