

ಕಲಬುರಗಿ: ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗಕ್ಕೆ ಘೋಷಣೆ ಆಗಿರುವ ಯೋಜನೆಗಳನ್ನು ಅನುಷ್ಠಾನ ಮಾಡಬೇಕು, ಹೊಸ ಯೋಜನೆಗಳನ್ನು ಘೋಷಿಸಿ ಈ ಭಾಗವನ್ನು ಅಭಿವೃದ್ಧಿ ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷö್ಮಣ ದಸ್ತಿ ಆಗ್ರಹಿಸಿದರು.
ಕಳೆದ ೧೧ ವರ್ಷದಿಂದ ಕೇಂದ್ರ ಸರ್ಕಾರವೂ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ನಿರಂತರ ಅನ್ಯಾಯ, ಮಲತಾಯಿ ಧೋರಣೆ ತೋರುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಪ್ರಮುಖ ೧೩ ಬೇಡಿಕೆ ಈಡೇರಿಸಲು ಆಗ್ರಹಿಸಿ ಕೇಂದ್ರಕ್ಕೆ ಸಂಸದ ರಾಧಾಕೃಷ್ಣ ದೊಡ್ಡಮನಿ ಮೂಲಕ ಮನವಿ ಸಲ್ಲಿಸಿದ್ದು, ಅವುಗಳನ್ನು ಈಡೇರಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಬೀದರ್ ಬಳ್ಳಾರಿ ಚತುಷ್ಪಥ ಕಾಮಗಾರಿ ಪೂರ್ಣಗೊಳಿಸಬೇಕು, ಭಾರತ್‌ಮಾಲಾ ಯೋಜನೆಗೆ ವೇಗ ನೀಡಬೇಕು, ಕಲಬುರಗಿ ನಗರಕ್ಕೆ ಎರಡನೇ ವರ್ತುಲ ರಸ್ತೆಗೆ ಹಣ ಮಂಜೂರು ಮಾಡಬೇಕು, ಮೇಗಾ ಟೆಕ್ಟ್ಟೈಲ್ ಪಾರ್ಕ್ನ್ನು ಎರಡು ಸರ್ಕಾರಗಳ ಸಮನ್ವಯತೆ ಸಾಧಿಸಿ, ಆರಂಭಿಸಬೇಕು, ಕಲಬುರಗಿ, ಬೀದರ್ ವಿಮಾನ ನಿಲ್ದಾಣಗಳನ್ನು ಉಡಾನ್ ಯೋಜನೆಗೆ ಒಳಪಡಿಸಬೇಕು, ನೆನೆಗುದಿಗೆ ಬಿದ್ದಿರುವ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಆರಂಭಿಸಬೇಕು ಎಂದು ಆಗ್ರಹಿಸಿದರು.
ಬೆಂಗಳೂರಿಗೆ ನೇರ, ಹೊಸ ಕಲ್ಯಾಣ ಕರ್ನಾಟಕ ಎಕ್ಸ್ಪ್ರೆಸ್ ಸೇರಿದಂತೆ ಬೀದರ್, ಕಲಬುರಗಿಯಿಂದ ಹೊಸ ರೈಲುಗಳನ್ನು ಆರಂಬಿಸಬೇಕು, ಕರೋನಾ ವೇಳೆ ಸ್ಥಗಿತವಾದ ಕಲಬುರಗಿ- ಹೈದರಾಬಾದ್, ವಿಜಯಪುರ - ರಾಯಚೂರು ಗುಂತಕಲ್ ಹಾಗೂ ವಾಡಿ, ಹೈದರಾಬಾದ್ ಫಲಕನಾಮಾ ಪ್ಯಾಸೇಂಜರ್ ರೈಲು ಪುನರಾರಂಭಿಸಬೇಕು ಎಂದು ಆಗ್ರಹಿಸಿದರು.
ಕಲ್ಯಾಣ ಕರ್ನಾಟಕದಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪನೆಗೆ ಮಂಜೂರು ಮಾಡಬೇಕು, ನಿಮ್ಹಾನ್ಸ್ ಆಸ್ಪತ್ರೆ ಸ್ಥಾಪಿಸಬೇಕು, ಕೃಷ್ಣಾ ನೀರಾವರಿ ಯೋಜನೆಯನ್ನು ಕೇಂದ್ರ ಸರ್ಕಾರದ ಸುಪರ್ದಿಗೆ ತೆಗೆದುಕೊಂಡು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು, ಬಸವಕಲ್ಯಾಣದಿಂದ ಮಹಾರಾಷ್ಟç, ಆಂಧ್ರಪ್ರದೇಶ, ತೆಲಂಗಾಣಕ್ಕೆ ಜೋಡಿಸುವ ರೈಲು ಮಾರ್ಗ ಮಂಜೂರು ಮಾಡಬೇಕು, ಕೇಂದ್ರ ಸರ್ಕಾರ ಸ್ವಾತಂತ್ರÈ ನಂತರ ಕಲ್ಯಾಣ ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿಗೆ ಕೈಗಾರಿಕೆಗಳನ್ನು ಸ್ಥಾಪಿಸಬೇಕು, ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ವಿಶೇಷ ಅನುದಾನ ಘೋಷಿಸಬೇಕು ಎಂದು ಆಗ್ರಹಿಸಿದರು.
ಕಕ ಹೋರಾಟ ಸಮಿತಿಯ ಪ್ರತಾಪಸಿಂಗ್ ತಿವಾರಿ, ಆರ್.ಕೆ.ಹುಡಗಿ, ಬಸವರಾಜ ಕುಮನೂರ, ಡಾ.ಮಾಜಿದ್ ದಾಗಿ, ಬಸವರಾಜ ಗುಲಶೆಟ್ಟಿ, ಡಾ.ಗಾಂಧೀಜಿ ಮೊಳಕೆರೆ, ಎಂ.ಬಿ.ನಿAಗಪ್ಪ, ಶಿವಲಿಂಗಪ್ಪ ಭಂಡಕ್, ಅಸ್ಲಾಂ ಚೌಂಗೆ ಇತರರಿದ್ದರು.