ಕೇಂದ್ರ ಬಜೆಟ್ ವಿರೋಧಿಸಿ ಪ್ರತಿಭಟನೆ

anti budget protest
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಕೇಂದ್ರ ಸರ್ಕಾರ ಇತ್ತೀಚೆಗೆ ಮಂಡಿಸಿದ 2025-26ನೇ ಸಾಲಿನ ಬಜೆಟ್ ವಿರೋಧಿಸಿ ವಿವಿಧ ಕಾರ್ವಿುಕ ಸಂಘಟನೆಗಳು ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದವು.

ಕಾರ್ಪೆರೇಟ್ ಕಂಪನಿಗಳ ಪರವಾದ ಹಾಗೂ ಬಡಜನರ ವಿರೋಧಿಯಾದ ಬಜೆಟ್ ಮಂಡಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಬಜೆಟ್ ಪ್ರತಿಗಳನ್ನು ದಹಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ, ಕೇಂದ್ರ ಸರ್ಕಾರ ಜನಪರ ಕಾಳಜಿ ಇಲ್ಲದ ತನ್ನ ಕಾರ್ಪೆರೇಟ್ ನೀತಿಗಳ ಮೂಲಕ ಈ ದೇಶದ ಜನರನ್ನು ಮೋಸಗೊಳಿಸುವ ನೀತಿಯನ್ನು ಮುಂದುವರಿಸಿದೆ. ದೇಶದಲ್ಲಿ ಒಂದಡೆ ಜನಗಳ ಕೊಂಡುಕೊಳ್ಳುವ ಶಕ್ತಿ ಕ್ಷೀಣಿಸುತ್ತಿದೆ. ಇನ್ನೊಂದಡೆ ಕಾರ್ಪೆರೇಟ್ ಕಂಪನಿಗಳ ಲಾಭವು ಗರಿಷ್ಠ ಮಟ್ಟಕ್ಕೆ ಏರಿಕೆಯಾಗುತ್ತಿದೆ. ಇದು ಕೇಂದ್ರ ಸರ್ಕಾರದ ಜನವಿರೋಧಿ ನಡೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆರೋಪಿಸಿದರು.

ಟಿಯುಸಿಸಿ ಮುಖಂಡ ಅಶೋಕ ರ್ಬಾ, ಚಿದಾನಂದ ಸವದತ್ತಿ, ಪುಂಡಲೀಕ ಬಡಿಗೇರ, ಎಐಟಿಯುಸಿ ಮುಖಂಡ ಬಸೀರ ಮುಧೋಳ, ಫಕ್ಕೀರೇಶ ಹರಕುಣಿ, ಎಂ.ಎ. ಮಾದಾಮಿ, ಎಂ.ಎಚ್. ಮುಲ್ಲಾ, ರಮೇಶ ಬೂಸ್ಲೆ, ಸಿಐಟಿಯು ಮುಖಂಡ ಗುರುಸಿದ್ದಪ್ಪ ಅಂಬಿಗೇರ, ಮಂಜುನಾಥ ಹುಜರಾತಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net