ಕೇಂದ್ರ ಗೃಹ ಸಚಿವರು ಮಧ್ಯ ಪ್ರವೇಶಿಸಲಿ

sanskruti trust
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಹಾಗೂ ಅನ್ಯಾಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಮಧ್ಯ ಪ್ರವೇಶಿಸಬೇಕೆಂದು ಸಂಸ್ಕೃತಿ ಟ್ರಸ್ಟ್ ಕರ್ನಾಟಕ ಉತ್ತರ ಪ್ರಾಂತ ಆಗ್ರಹಿಸಿದೆ.

ಟ್ರಸ್ಟ್​ನ ಸದಸ್ಯರು ಹಾಗೂ ನಗರದ ಮಹಿಳೆಯರು ಶನಿವಾರ ಹುಬ್ಬಳ್ಳಿ ತಹಸೀಲ್ದಾರ ಮೂಲಕ ಕೇಂದ್ರ ಗೃಹ ಸಚಿವರಿಗೆ ಈ ಕುರಿತು ಮನವಿ ಸಲ್ಲಿಸಿದರು.

ಪಶ್ಚಿಮ ಬಂಗಾಳದಲ್ಲಿ ಹದಗೆಡುತ್ತಿರುವ ಮಹಿಳೆಯರ ಸ್ಥಿತಿ ಗಂಭೀರ ಹಾಗೂ ಕಳವಳಕಾರಿಯಾಗಿದೆ. ಕೂಚ್ ಬೆಹಾರ್ ಹಾಗೂ ಉತ್ತರ ದಿನಾಜ್​ಪುರ (ಚೊಪ್ರಾ) ನಲ್ಲಿ ನಡೆದ ಘಟನೆಗಳು ನಾಗರಿಕ ಸಮಾಜ ತಲೆತಗ್ಗಿಸುವಂತದ್ದು. ಇಂಥ ಘಟನೆಗಳು ತಾಲಿಬಾನ್ ಆಡಳಿತವನ್ನು ನೆನಪಿಸುತ್ತದೆ ಎಂದು ಹೇಳಿದರು.

ಮಹಿಳೆ ಮುಖ್ಯಮಂತ್ರಿಯಾಗಿದ್ದರೂ ರಾಜ್ಯದಲ್ಲಿ ಮಹಿಳೆಯರ ಮೇಲೆ ಅನ್ಯಾಯ, ದೌರ್ಜನ್ಯ, ಅವಮಾನ ನಡೆಯುತ್ತಿದೆ. ಕೂಚ್ ಬೆಹಾರ್ ಹಾಗೂ ಉತ್ತರ ದಿನಾಜ್​ಪುರ ಘಟನೆ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಸಂತ್ರಸ್ತ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸಬೇಕು. ಪಶ್ಚಿಮ ಬಂಗಾಳದಲ್ಲಿ ನ್ಯಾಯ ಮತ್ತು ಕಾನೂನಿನ ಆಳ್ವಿಕೆಯನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಟ್ರಸ್ಟ್ ಸದಸ್ಯೆಯರಾದ ಆಶಾ ನಾಯಕ, ರಾಧಾ ಪುರಾಣಿಕ, ಸಂಧ್ಯಾ ದಿಕ್ಷಿತ, ಅರ್ಚನಾ ಗೋಡಬೋಲೆ, ಅರುಣಾ ಪಾಟೀಲ, ರಾಜಶ್ರೀ ಜಡಿ, ರತ್ನಾ ಮಾತಾಜಿ, ಅರುಣಾ ದೇಶಪಾಂಡೆ, ಶೃತಿ ಗೌಡಾ, ಉಮಾ ಬಾರಲೋಣಿ, ನೀಲಮ್ಮ, ಪ್ರೀಯಾ ಗರಗ, ಅದಿತಿ ವರ್ಣೆಕರ್, ಪ್ರೀತಿ ಪುಟಲೇಕರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net