ಕೆಸರು ಗದ್ದೆಯಾದ ವಡಗಾಂವ(ದೇ) ಮಾದರಿ ಶಾಲೆ ಅಂಗಳ

Capture1
Published on

ಔರಾದ್: ವಡಗಾಂವ(ದೇ) ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಮಳೆ ನೀರು ನಿಂತು ಕೆಸರು ಗದ್ದೆಯಂತಾಗಿದೆ. ಇದರಿಂದ ಪಾಲಕರು ಮಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

1932ರಲ್ಲಿ ಉರ್ದು ಮಾಧ್ಯಮದಲ್ಲಿ ಆರಂಭವಾದ ಈ ಶಾಲೆ ತರುವಾಯ 1948ರ ಪೊಲೀಸ್ ಆ್ಯಕ್ಷನ್ ನಂತರ ಕನ್ನಡ ಮಾಧ್ಯಮ ಶಾಲೆಯಾಗಿ ಪರಿವರ್ತನೆಗೊಂಡಿತು. 90 ದಶಕಗಳ ಇತಿಹಾಸವಿರುವ ಈ ಸ್ಕೂಲ್ನಲ್ಲಿ ಸಹಸ್ರಾರು ಮಕ್ಕಳು ಶಿಕ್ಷಣ ಕಲಿತು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಪ್ರಸ್ತುತ ಕನ್ನಡ ಮಾಧ್ಯಮದಲ್ಲಿ 345, ಉರ್ದು ಮಾಧ್ಯಮದಲ್ಲಿ 40 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.

18 ಶಿಕ್ಷಕರಿದ್ದು, ಶಾಲೆಯಲ್ಲಿ ಉತ್ತಮ ಶಿಕ್ಷಣ ಸಿಗುತ್ತಿರುವ ಕಾರಣ ಮಕ್ಕಳ ಸಂಖ್ಯೆ ಕೂಡ ಹೆಚ್ಚಾಗಿದೆ. ತರಗತಿ ಕೋಣೆಗಳು ಸಹ ಉತ್ತಮವಾಗಿವೆ. ಆದರೆ, ಸ್ವಲ್ಪ ಮಳೆ ಸುರಿದರೂ ರಸ್ತೆ ಹಾಗೂ ಸುತ್ತಮುತ್ತಲಿನ ನೀರು ಶಾಲಾ ಆವರಣದಲ್ಲಿ ಸಂಗ್ರಹವಾಗಿ ಕೆಸರಿನ ಗದ್ದೆಯಾಗುತ್ತದೆ. ಇದರಿಂದ ಮಕ್ಕಳು ಓಡಾಡಲು ತೊಂದರೆ ಆಗಿದೆ. ಕೆಲ ವಿದ್ಯಾರ್ಥಿಗಳು ಜಾರಿಬಿದ್ದು ಗಾಯ ಮಾಡಿಕೊಂಡಿದ್ದಾರೆ. ಆಟಕ್ಕೂ ತೊಂದರೆಯಾಗಿದೆ. ಸಾಂಕ್ರಾಮಿಕ ರೋಗ ಭೀತಿಯೂ ಆವರಿಸಿದೆ. ಇದರಿಂದ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುವಂತಾಗಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತು ಶಾಲಾ ಮೈದಾನವನ್ನು ಸಮತಟ್ಟು ಮಾಡಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಆಟದ ಮೆದಾನ ಅಭಿವೃದ್ಧಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅವಕಾಶವಿದೆ. ಆದರೆ ಗ್ರಾಪಂ ಕೂಡ ನಿರ್ಲಕ್ಷೃ ವಹಿಸುತ್ತಿದೆ. ಮನವಿಗೂ ಸಂಬಂಧಿತ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

ಳೆದ ತಿಂಗಳಿನಲ್ಲಿ ಶಾಲಾ ಮೈದಾನ ದುರಸ್ತಿ ಮಾಡಿಕೊಡುವಂತೆ ಗ್ರಾಪಂಗೆ ಮನವಿ ನೀಡಲಾಗಿದೆ. ಆದರೆ ಇಲ್ಲಿಯವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಮಳೆ ನೀರು ಸೇರಿದಂತೆ ಹೊರಗಡೆಯ ನೀರು ಆವರಣದಲ್ಲಿ ಸಂಗ್ರಹವಾಗುತ್ತಿದ್ದು, ಸಮಸ್ಯೆ ಎದುರಾಗಿದೆ. ಕೂಡಲೇ ಸಮತಟ್ಟು ಮಾಡಿದರೆ ವಿದ್ಯಾಥರ್ಿಗಳಿಗೆ ಅನುಕೂಲವಾಗಲಿದೆ.
| ಪ್ರೇಮಕುಮಾರ, ಮುಖ್ಯಗುರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net